2.50 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ತಿತಿಮತಿ-ಪಾಲಿಬೆಟ್ಟ ಸಂಪರ್ಕ ರಸ್ತೆ ಉದ್ಘಾಟನೆ

Feb 6, 2026 - 12:27
 0  218
2.50 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ತಿತಿಮತಿ-ಪಾಲಿಬೆಟ್ಟ ಸಂಪರ್ಕ ರಸ್ತೆ  ಉದ್ಘಾಟನೆ

ವಿರಾಜಪೇಟೆ; ಪೊನ್ನಂಪೇಟೆ ತಾಲೂಕು ತಿತಿಮತಿ-ಪಾಲಿಬೆಟ್ಟಕ್ಕೆ ತೆರಳುವ ಲೋಕೋಪಯೋಗಿ ರಸ್ತೆಯ ರೂ. 2.50 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ಕಾಮಗಾರಿಯನ್ನು,ಗುರುವಾರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ಸಾರ್ವಜನಿಕರ ಬಳಕೆಗಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರರಾದ ಲಕ್ಷ್ಮಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಅಧ್ಯಕ್ಷ ನವೀನ್, ಪ್ರಚಾರ ಸಮಿತಿಯ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಹಿರಿಯರಾದ ಬೆನ್ನಿ, ಚೆಕ್ಕು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಂಕಜ, ವಾಣಿ, ರಜಿನಿ, ಡಿಸಿಸಿ ಸದಸ್ಯರಾದ ವಿನಯ್ ಕುಮಾರ್, ಡಾ ಮಧ್ಯಸ್ತಾ, ಪಂಚಾಯಿತಿ ಸದಸ್ಯರಾದ ಅಫ್ರೋಜ್, ಗಣೇಶ್, ಅಣ್ಣಳಮಾಡ ಹರೀಶ್, ಅನಿಲ್, ಅಯೂಬ್, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0