ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ನೂತನ ಸಭಾಭವನ ಉದ್ಘಾಟನೆ

Jul 10, 2026 - 09:33
 0  229
ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ನೂತನ ಸಭಾಭವನ ಉದ್ಘಾಟನೆ

ಗೋಣಿಕೊಪ್ಪ: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ನೂತನ ಸಭಾಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಆಗಮಿಸಿದರು. ಬ್ರಾಹ್ಮಣರ ಸಭಾಭವನದ ಭೋಜನಾ ಶಾಲೆಯ ಉದ್ಘಾಟಕರಾಗಿ ಆಗಮಿಸಬೇಕಾಗಿದ್ದ ಮಾನ್ಯ ಶಾಸಕರು, ಕಾರ್ಯಕ್ರಮದ ಒತ್ತಡದಿಂದಾಗಿ ಮಧ್ಯಾಹ್ನ ಬಳಿಕ ಆಗಮಿಸಿ ಎಲ್ಲರಿಗೂ ಶುಭ ಕೋರಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು, ಸಮಾಜಕ್ಕೆ ವಿಪ್ರ ಸಮುದಾಯದ ಕೊಡುಗೆಯನ್ನು ಸ್ಮರಿಸಿದರಲ್ಲದೆ, ಮುಂದೆಯೂ ತಮ್ಮ ಕೈಲಾಗುವ ಸಹಾಯವನ್ನು ವಿಪ್ರ ಸಮಾಜದ ಏಳಿಗೆಗಾಗಿ ನೀಡುವುದಾಗಿ ತಿಳಿಸಿದರು.

ಈ ಹಿಂದೆ ಮಾನ್ಯ ಶಾಸಕರು ಇಲ್ಲಿಗೆ ಆಗಮಿಸಿದ ಸಂದರ್ಭದಲ್ಲಿ ನೀಡಿದ ಧನ ಸಹಾಯವನ್ನು ಸ್ಪರಿಸಿಕೊಂಡ ಸಮಾಜದ ಅಧ್ಯಕ್ಷರು ಅವರಿಗೆ ಯಶಸ್ಸನ್ನು ಕೋರುತ್ತಾ ಅತಿ ಶೀಘ್ರದಲ್ಲಿ ಮಂತ್ರಿಯಾಗಿ ಬರುವಂತೆ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಮಂಜುನಾಥ್, ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0