ಕೊಡವ ವೆಲ್‌ಫೇರ್& ರಿಕ್ರಿಯೇಷನ್ ಅಸೋಸಿಯೇಶನ್‌ನ ನೂತನ ಕಟ್ಟಡ ‘ಕೊಡವ ಭವನ’ ಉದ್ಘಾಟನೆ
admincoorgdaily

ಮಡಿಕೇರಿ; ಕೊಡವ ವೆಲ್‌ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಶನ್‌ನ ನೂತನ ಕಟ್ಟಡ ‘ಕೊಡವ ಭವನ’ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮ ಸಹ ನೆರೆವೇರಿಸಲಾಯಿತು. ಮಡಿಕೇರಿ ತಾಲೂಕು ಅರೆಕಾಡು ಗ್ರಾಮದಲ್ಲಿ ಈ ನೂತನ ಭವನ ನಿರ್ಮಾಣಗೊಂಡಿದ್ದು, ಉದ್ಘಾಟನೆ ಬಳಿಕ ಮಾತನಾಡಿದ ಮಾನ್ಯ ಶಾಸಕರು, ಈ ಒಂದು ಕಟ್ಟಡವು ಸ್ಥಳೀಯ ಕೊಡವ ಜನಾಂಗದವರ ಸಮ್ಮಿಲನಕ್ಕೆ ಹಾಗೂ ಪರಸ್ಪರ ಬೆರೆತು ಪರಿಚಯಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು. ಕೊಡವ ಸಾಹಿತ್ಯ ಸಂಸ್ಕೃತಿ ಮತ್ತು ಆಚಾರ ವಿಚಾರಗಳು ಮುಂದಿನ ಪೀಳಿಗೆಗೆ ತಿಳಿಯಪಡಿಸಲು ಇಂತಹ ಯೋಜನೆಗಳು ಸಹಕಾರಿಯಾಗಲಿದೆ ಎಂದು ಹೇಳುತ್ತಾ ಎಲ್ಲರಿಗೂ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಂಡೇಪಂಡ ಸುಜಾ ಕುಶಾಲಪ್ಪ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಶ್ರೀ ಚೆಪ್ಪುಡೀರ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷರು ಶ್ರೀ ತಿತೀರ ಧರ್ಮಜ ಉತ್ತಪ್ಪ, ಕೊಡವ ಭವನ’ದ ಅಧ್ಯಕ್ಷರಾದ ಕುಕ್ಕೆರ ಜಯಾ ಚಿಣ್ಣಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಬೆಳೆಗಾರರಾದ ನಡಿಕೇರಿಯಂಡ ಪಿ. ಮೋಹನ್ ಮಾಚಯ್ಯ ಹಾಗೂ ಪ್ರಮುಖರು ಉಪಸ್ಥಿತರಿದ್ದರು.