ಪ್ರವಾಸಿ ಟ್ಯಾಕ್ಸಿ ಚಾಲಕರಿಂದ ಸ್ವಾತಂತ್ರದಿನ ಆಚರಣೆ: ನಿವೃತ್ತ ಠಾಣಾಧಿಕಾರಿಗೆ ಸನ್ಮಾನ
admincoorgdaily

ಸಿದ್ದಾಪುರ :-ಲಗು ಪ್ರವಾಸಿ ವಾಹನಗಳ ಚಾಲಕರ ಹಾಗೂ ಮಾಲೀಕರ ಸಂಘದ ನೇತೃತ್ವದಲ್ಲಿ 80ನೇ ಸ್ವಾತಂತ್ರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರವಾಸಿ ಟ್ಯಾಕ್ಸಿ ನಿಲ್ದಾಣದಲ್ಲಿ ಧ್ವಜವಂದನೆ ಸಲ್ಲಿಸಿದ ಚಾಲಕರು ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ನಂತರ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಬ್ಬ್ಇಪ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನ ನಡೆಸುತ್ತಿರುವ ರಾಜುರವರನ್ನು ಸನ್ಮಾಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಸ್ವಾನ್ಲಿ, ಕಾರ್ಯದರ್ಶಿ ಖಜಾಂಚಿ ಮಹೇಶ್, ಸದಸ್ಯರಾದ ಗಣೇಶ್, ಮೊಹದಾಲಿ,ಶಿವಪ್ಪ, ಸಿದ್ದರಾಜು, ಕುಞ್ಞಾನ್, ಲತೀಫ್ ರಫೀಕ್ ಹಾಜರಿದ್ದರು.