ಕಡಂಗ ವಿಜಯ ವಿದ್ಯಾ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
admincoorgdaily
ಕಡಂಗ:ಸ್ಥಳೀಯ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲೆಯ ಅಧ್ಯಕ್ಷರಾದ ಬಲ್ಯಂಡ ಬಿದ್ದಪ್ಪ ನೆರವೇರಿಸಿದರು. ಮುಖ್ಯ ರಸ್ತೆಯಲ್ಲಿ ಮಳೆಯ ನಡುವೆಯು ವಿದ್ಯಾರ್ಥಿಗಳ ಪಥ ಸಂಚಲನ ಜನರ ಮನ ಗೆದ್ದಿತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ನಡೆಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿ ಗಳಾಗಿ ಕೋದಂಡ ಸುಬ್ಬಯ್ಯ, ಬಲ್ಲಚಂಡ ಮಾದಯ್ಯ, ಕೋಡಿರ ಪೊನ್ನು ಮಂದಣ್ಣ, ಶಾಲಾ ಮುಕ್ಯೋಪಾಧ್ಯಾನಿ ಗೀತಾ ಬೊಜಮ್ಮ ಮತ್ತು ಶಾಲಾ ಶಿಕ್ಷಕರು,ಪೋಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ:ನೌಫಲ್