ಕೊಡಗು ಎಸ್.ಎನ್.ಡಿ.ಪಿ ಯೂನಿಯನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಸಿದ್ದಾಪುರ:79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೊಡಗು ಎಸ್.ಎನ್.ಡಿ.ಪಿ ಯೂನಿಯನ್ ವತಿಯಿಂದ ಎಸ್.ಎನ್.ಡಿ.ಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಹಿರಿಯರು, ಸೌಹಾರ್ದ ಸಂಘದ ಉಪಾಧ್ಯಕ್ಷರು, ಎಸ್.ಎನ್.ಡಿ.ಪಿ ಮಾಜಿ ಕಾರ್ಯದರ್ಶಿಗಳಾದ ಎಂ.ವಿ ಸಜೀವನ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಯೂನಿಯನ್ ಅಧ್ಯಕ್ಷರಾದ ವಿ.ಕೆ ಲೋಕೇಶ್, ಕಾರ್ಯದರ್ಶಿ ಪ್ರೇಮಾನಂದನ್, ಆಚರಣಾ ಸಮಿತಿ ಅಧ್ಯಕ್ಷರಾದ ರಾಜನ್, ಯೂನಿಯನ್ ಕೌನ್ಸಿಲರ್, ಸಂಘಟನೆಯ ಪ್ರಮುಖರು ಸೇರಿದಂತೆ ನಾರಾಯಣ ಗುರುಗಳ ಭಕ್ತರು ಹಾಜರಿದ್ದರು.