Kodagu

ಮೇಕೇರಿ ಸರಕಾರಿ ಶಾಲೆಯಲ್ಲಿ ಜಾದೂ ಮೂಲಕ ಸ್ವಾತಂತ್ರ್ಯ ಸಂಭ್ರಮ

admincoorgdaily

ಮಡಿಕೇರಿ:ಮೇಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಶಾಲೆಯ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಜರುಗಿತು. ಜಾದೂ ಪ್ರದಶ೯ನದ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ಸಂಭ್ರಮವನ್ನು ವಿದ್ಯಾಥಿ೯ಗಳೊಂದಿಗೆ ಹಂಚಿಕೊಳ್ಳಲಾಯಿತು. ಶಾಲಾಭಿವೃದ್ಧಿ ಅಧ್ಯಕ್ಸೆ ರಮ್ಯಾ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಸ ರತ್ನಾಕರ ರೈ, ರೋಟರಿ ಸಂಸ್ಥೆಯ ಸದಸ್ಯರು ಗ್ರಾಮದ ಮುಖ್ಯಸ್ಥರೊಂದಿಗೆ ಧ್ವಜಾರೋಹಣವನ್ನ ನೆರವೇರಿಸಿದರು . ನಂತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ವಹಿಸಿ, ಮಕ್ಕಳಿಗೆ ಶಿಸ್ತು, ಸ್ವಚ್ಚತೆ ಹಾಗೂ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕೆಂದು ಪ್ರೇರಣದಾಯಕ ಸಂದೇಶ ನೀಡಿದರು. ವೇದಿಕೆಯಲ್ಲಿ ಮಾಜಿ ಸೈನಿಕ ಚೋಂಡೀರ ಸುರೆಶ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾಯ೯ಪ್ಪ, ನಿದೇ೯ಶಕ ಡಾ. ಚೇತನ್, ರೋಟರಿ ಮಿಸ್ಟಿಹಿಲ್ಸ್ ಸದಸ್ಯರು , ಶಾಲಾಭಿವೖದ್ದಿ ಸಮಿತಿ ಸದಸ್ಯರಾದ , ಉಮೇಶ್, ರಫೀಕ್, ಸುಶೀಲಾ, ಮಧು ಉಪಸ್ಥಿತರಿದ್ದರು.

 ಮಕ್ಕಳಿಗೆ ಖ್ಯಾತ ಜಾದೂಗಾರರಾದ ವಿಕ್ರಮ್ ಜಾದುಗಾರ 79 ನೇ ಸ್ವಾತಂತ್ರ್ಯ ಸಂಬಭ್ರಮದ ಅಂಗವಾಗಿ ಜಾದೂ ಪ್ರದರ್ಶನ ನೀಡಿ ಮಕ್ಕಳನ್ನು ರಂಜಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಬಿತಾ ಸ್ವಾಗತಿಸಿದರು. ಶ್ರೀಲತಾ ವಂದಿಸಿದರು. ವೀಣಾ ನಿರೂಪಿಸಿದರು