Kodagu

ಕಡಂಗ ಬದ್ರಿಯಾ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

admincoorgdaily

ಕಡಂಗ:ಬದ್ರಿಯಾ ಜುಮಾ ಮಸೀದಿ, ಮತ್ತು ಮದರಸದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಖತೀಬ್ ಅಬ್ದುಲ್ ರೆಹಮಾನ್ ಸಹದಿ ನಿರ್ವಹಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಎಸ್ ವೈ ಎಸ್ ಅಧ್ಯಕರಾದ ನಿಸಾರ್ ಸಖಾಫಿ ವಹಿಸಿದರು. ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷರಾದ ಉಸ್ಮಾನ್ ಎವರ್ಗ್ರೀನ್ ನೆರವೇರಿಸಿದರು. ಜಮಾಅತ್ ಖತೀಬರಾದ ಸ್ವಾದಿಕ್ ಸಖಾಫಿ ಮುಖ್ಯ ಭಾಷಣ ಮಾಡಿದರು. ಜಮಾಹತ್ ಕಾರ್ಯದರ್ಶಿ ರಾಶಿದ್, ಕೋಶಾಧಿಕಾರಿ ರಝಾಖ್, ಹಾಗೂ ಜಮಾಅತ್ ಪದಾಧಿಕಾರಿಗಳು, ಅಧ್ಯಾಪಕರು,ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ನೌಫಲ್