Kodagu

ಕೊಡಗು ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ: ಹೋರಾಟಗಾರರನ್ನು ಸ್ಮರಿಸಿ ಮಲ್ಲಿಕಾ ಸುಬ್ರಹ್ಮಣ್ಯ

admincoorgdaily

ಕೊಡಗು ವಿದ್ಯಾಲಯದಲ್ಲಿ   ಸ್ವಾತಂತ್ರ್ಯ ದಿನಾಚರಣೆ: ಹೋರಾಟಗಾರರನ್ನು ಸ್ಮರಿಸಿ  ಮಲ್ಲಿಕಾ ಸುಬ್ರಹ್ಮಣ್ಯ

ಮಡಿಕೇರಿ, ಆ 18 - ನಗರದ ಕೊಡಗು ವಿದ್ಯಾಲಯ, ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಭಕ್ತಿ, ಸಂಭ್ರಮ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕೊಡಗು ವಿದ್ಯಾಲಯದ ಮಾಜಿ ಶೈಕ್ಷಣಿಕ ಸಂಯೋಜಕರಾದ ಮಲ್ಲಿಕಾ ಸುಬ್ರಮಣ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಕಾರ್ಯಕ್ರಮದ ಅಂಗವಾಗಿ ಮುಖ್ಯ ಅತಿಥಿ ಮಲ್ಲಿಕಾ ಸುಬ್ರಹ್ಮಣ್ಯ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿ, ಅವರ ತ್ಯಾಗ ಮತ್ತು ಆದರ್ಶಗಳನ್ನು ಮಕ್ಕಳು ಎಂದಿಗೂ ಮರೆಯಬಾರದು ಎಂದು ಹೇಳಿದರು. ಪೋಷಕರು ಮಕ್ಕಳಿಗೆ ನೀಡುವ ಪ್ರೀತಿ, ಕಾಳಜಿ, ಮಾರ್ಗದರ್ಶನ ಹಾಗೂ ಅಗತ್ಯ ಸಹಾಯವನ್ನು ಮಕ್ಕಳು ಎಂದಿಗೂ ಮರೆಯಬಾರದು. ಪೋಷಕರ ಪ್ರೀತಿ ಮತ್ತು ಬೆಂಬಲವನ್ನು ಗೌರವಿಸಿ, ಅವರೊಂದಿಗೆ ಸದಾ ಕೃತಜ್ಞತೆಯ ಮನೋಭಾವದಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳು ಕೂಡ ಇತರರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ತಮ್ಮ ಶಾಲಾ ದಿನಗಳ ಸ್ಮರಣೀಯ ಅನುಭವಗಳನ್ನು ಹಂಚಿಕೊಂಡ ಅವರು, ಜೀವನದಲ್ಲಿ ಯಾವಾಗಲೂ ಸತ್ಯವನ್ನು ಹೇಳಬೇಕು ಹಾಗೂ ಸತ್ಯದ ಮಾರ್ಗದಲ್ಲಿ ನಡೆಯಬೇಕು ಎಂಬ ಸಂದೇಶವನ್ನು ಮಲ್ಲಿಕಾ ನೀಡಿದರು.

 ಅಭಿಷೇಕ್ ಮತ್ತು ರೋಜಾ ಅವರು ನೃತ್ಯ ನಿದೇ೯ಶನದಲ್ಲಿ , ವಿದ್ಯಾರ್ಥಿಗಳು ಅತ್ಯುತ್ತಮವಾಗಿ ಸಾಂಸ್ಕೖಿಕ ಕಲಾ ಪ್ರದಶ೯ನ ನೀಡಿದರು. ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಪೋಷಕರು ಉತ್ಸಾಹದಿಂದ ಭಾಗವಹಿಸಿದರು. ಅನಿಷ್ಕ ಮತ್ತು ಶೌರ್ಯ ಪೂಣಚ್ಚ ರಸಪ್ರಶ್ನೆಯನ್ನು ಕುತೂಹಲಭರಿತವಾಗಿ ನಡೆಸಿಕೊಟ್ಟರು. ಪೋಷಕರಿಗಾಗಿ ನಡೆದ ವಿಶೇಷ ರಸಪ್ರಶ್ನೆಯನ್ನು ಶ್ರೀ ಮಹತ್ವ ಅಪ್ಪಯ್ಯ ನಿವ೯ಹಿಸಿದರು. 

 ವಿದ್ಯಾರ್ಥಿಗಳ ರಸಪ್ರಶ್ನೆಯಲ್ಲಿ ಬಾಪು ಗ್ರೂಪ್ ವಿಜೇತರಾದರು. ವಿಜೇತ ವಿದ್ಯಾರ್ಥಿಗಳು ಹಾಗೂ ಪೋಷಕರಾದ ಚಂದ್ರಕಾಂತ ಅವರಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಲಕ್ಷ್ಯ ಪೊನ್ನಕ್ಕ ಮತ್ತು ನಿರಂಜನ್ ಎನ್. ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಆರುಷ್ ಅಭಿನಂದನ್ ಅವರು ವಂದನಾರ್ಪಣೆ ಸಲ್ಲಿಸಿದರು. ನಂತರ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಸುಮಿತ್ರ ಕೆ. ಎಸ್., ಆಡಳಿತಧಿಕಾರಿ ಪಿ.ರವಿ ಹಾಜರಿದ್ದರು.