Kodagu

ಕುಶಾಲನಗರದಲ್ಲಿ ಸ್ವಾತಂತ್ರ್ಯೋತ್ಸವ

admincoorgdaily

ಕುಶಾಲನಗರದಲ್ಲಿ ಸ್ವಾತಂತ್ರ್ಯೋತ್ಸವ

ಕುಶಾಲನಗರ, ಆ.15 : ವರ್ಷಗಳುರುಳಿದಂತೆ ಭಾರತೀಯನ ರಾಷ್ಟ್ರಪ್ರೇಮ ,ರಾಷ್ಟ್ರ ಪ್ರಜ್ಞೆ, ರಾಷ್ಟ್ರ ಚಿಂತನೆ, ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಕುಶಾಲನಗರದಲ್ಲಿ ಇಂದಿನ ಸ್ವಾತಂತ್ರ್ಯೋತ್ಸವದ ಆಚರಿಸುವಿಕೆಯ ಪ್ರಮುಖ ಭಾಗವಾದ ರಾಷ್ಟ್ರಧ್ವಜಾರೋಹಣ ಸಾಕ್ಷಿ. ಕೆಲವು ವರ್ಷಗಳ ಹಿಂದೆ ಬಹುತೇಕ ಎಲ್ಲ ತೆರದ ವಾಹನಗಳಲ್ಲಿ , ಕಟ್ಟಡಗಳಲ್ಲಿ ರಾಷ್ಟ್ರ ಧ್ವಜ ಹಾರುತ್ತಿದ್ದುದು ಸತ್ಯ.

ಆದರೆ ಇಂದು ಕೇವಲ ಬೆರಳೆಣಿಕೆಯಷ್ಟು ವಾಹನಗಳಲ್ಲಿ, ಕಟ್ಟಡದಲ್ಲಿ ಮಾತ್ರ ರಾಷ್ಟ್ರಧ್ವಜ ಕಂಡುಬರುತ್ತಿದೆ. ದೇಶದ ಪ್ರಧಾನಿ ಮೋದೀಜಿಯ 'ಹರ್ ಘರ್ ತಿರಂಗಾ'ವನ್ನು ಜನ ಮರೆತಂತಿದೆ. ಆದರೆ ನೋಡಿ, ನಗರದ ಕೊರತೆಯನ್ನು ನೀಗಿಸುವಂತೆ ಈ ಸೀಮಿತ ಚೌಕಟ್ಟಿನೊಳಗಡೆ ಎಷ್ಟು ಎತ್ತರಕ್ಕೆ ಸಾಧ್ಯವೊ ಅಷ್ಟು ಎತ್ತರಕ್ಕೆ ಇವರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.