ವಿರಾಜಪೇಟೆಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿಯಾದ ಇಂಡಿಯನ್ ‌ಯೂನಿಯನ್ ಮುಸ್ಲಿಂ ‌ಲೀಗ್ ಅಧ್ಯಕ್ಷ ಸಾದಿಕ್ ಅಲಿ ಶಿಹಾಬ್ ತಂಙಳ್

Apr 20, 2026 - 22:45
Apr 20, 2026 - 22:47
 0  559
ವಿರಾಜಪೇಟೆಯಲ್ಲಿ ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿಯಾದ ಇಂಡಿಯನ್ ‌ಯೂನಿಯನ್ ಮುಸ್ಲಿಂ ‌ಲೀಗ್ ಅಧ್ಯಕ್ಷ ಸಾದಿಕ್ ಅಲಿ ಶಿಹಾಬ್ ತಂಙಳ್

ವಿರಾಜಪೇಟೆ; ಕೇರಳ ಐ.ಯು.ಎಮ್.ಎಲ್ ಪಕ್ಷದ ರಾಜ್ಯಾಧ್ಯಕ್ಷರಾದ ಸಾದಿಕ್ ಆಲಿ ಶಿಹಾಬ್ ತಮಙಲ್ ರವರು, ವಿರಾಜಪೇಟೆಗೆ ಆಗಮಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರನ್ನು ಭೇಟಿಯಾದರು.

 ಕಾರ್ಯನಿಮಿತ್ತ ವಿರಾಜಪೇಟೆಗೆ ಆಗಮಿಸಿದ್ದ ರಾಜ್ಯಾಧ್ಯಕ್ಷರು, ಶಾಸಕ ಪೊನ್ನಣ್ಣ ರವರು ತಮ್ಮ ಗೃಹ ಕಚೇರಿಯಲ್ಲಿ ಇರುವುದನ್ನು ತಿಳಿದು ಅನೌಪಚಾರಿಕ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಯಾಕೂಬ್, ಮತೀನ್, ಸಲಾಂ, ದೇಚಮ್ಮ, ಜಾಫರ್, ಬಾಲಕೃಷ್ಣ ನಾಯರ್, ಬೋಪಣ್ಣ, ಅತಿಫ್ ಮನ್ನ, ಮೈದು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0