Kodagu

ಜ್ಞಾನಗಂಗಾ ಶಾಲೆಯ ಇಂಟರಾಕ್ಟ್ ಪದಗ್ರಹಣ

admincoorgdaily

ಜ್ಞಾನಗಂಗಾ ಶಾಲೆಯ ಇಂಟರಾಕ್ಟ್ ಪದಗ್ರಹಣ

ಮಡಿಕೇರಿ, ಆ. 9: ಜ್ಞಾನಗಂಗಾ ವಸತಿ ಶಾಲೆಯ ಇಂರ‍್ಯಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ಕಾನಿಷ್ಕ ಎ.ಸಿ., ಉಪಾಧ್ಯಕ್ಷರಾಗಿ ಮನನ್ ಎಂ., ಕಾರ್ಯದರ್ಶಿಯಾಗಿ ವಿಶ್ರುತ, ಸಹ ಕಾರ್ಯದರ್ಶಿಯಾಗಿ ಸುಚೇತ್, ಖಜಾಂಚಿಯಾಗಿ ಶಿಶಿರ್ ಭಟ್ ಹಾಗೂ ನಿರ್ದೇಶಕರು ಅಧಿಕಾರ ವಹಿಸಿಕೊಂಡರು.

 ಅಧಿಕಾರ ಬೋಧನೆ ಮಾಡಿ ಮಾತನಾಡಿದ ಮಿಸ್ಟಿ ಹಿಲ್ಸ್ನ ಮಾಜಿ ಅಧ್ಯಕ್ಷ ಜಗದೀಶ್ ಪ್ರಶಾಂತ್, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಬೆಳವಣಿಗೆ ಮಾಡುವುದೇ ರೋಟರಿ ಸಂಸ್ಥೆಯ ಉದ್ದೇಶ ಎಂದು ಹೇಳಿದರು. ಇಂಟರಾಕ್ಟ್ ಸಂಸ್ಥೆಯನ್ನು ಸೇರುವ ಮೂಲಕ ವಿದ್ಯಾರ್ಥಿಗಳು ಜವಾಬ್ದಾರಿ ಹೆಚ್ಚಿಸಿಕೊಳ್ಳುತ್ತಾರೆ. ದೂರದೃಷ್ಟಿತ್ವ ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಸಾಮಾಜಿಕ ಕಳಕಳಿ ವೃದ್ಧಿಯಾಗುತ್ತದೆ ಎಂದು ಹೇಳಿದರು.

 ಇಂಟರ್ಯಾಕ್ಟ್ ಚೇರ್ಮನ್ ಬಿ.ಜಿ. ಅನಂತಶಯನ ಮಾತನಾಡಿ, ಶಾಲೆಯ ಜೊತೆಗಾರನೊಬ್ಬ ದುಃಖದಿಂದ ಕುಳಿತಿರುವಾಗ ಅವನ ಬೆನ್ನುತಟ್ಟಿ ಮಾತನಾಡಿಸುವುದು ಕೂಡ ಒಂದು ಸೇವೆಯೇ ಎಂದು ಹೇಳಿದರು. ಸೇವೆಯೊಂದಿಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಂಡು ಶಾಲೆ ಕುಟುಂಬ ಮತ್ತು ದೇಶಕ್ಕೆ ಗೌರವ ತರುವ ರೀತಿ ಬಾಳಬೇಕೆಂದು ಹೇಳಿದರು.

 ಶಾಲಾ ಅಧ್ಯಕ್ಷ ಸುಧೀರ್ ಮಾತನಾಡಿ, ಸೇವಾ ಮನೋಭಾವ ಎಂಬುದು ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಬಂದರೆ ಮುಂದೆ ಅವರು ಉತ್ತಮ ನಾಯಕರಾಗಿ ಬೆಳಗುತ್ತಾರೆ ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲೆ ಸತ್ಯ ಸುಲೋಚನ ಮಾತನಾಡಿ, ಅಂತರರಾಷ್ಟ್ರೀಯ ಸಂಸ್ಥೆ ರೂಟರಿಯ ಉದ್ದೇಶ ಸ್ವಹಿತ ಮೀರಿದ ಸೇವೆ ಎಂದರು.

ಸೇವಾ ಮನೋಭಾವ ಎಂಬುದು ವಿದ್ಯಾರ್ಥಿ ದೆಸೆಯಿಂದ ಕೊನೆತನಕವು ಇರಬೇಕು ಎಂದು ಆಶಿಸಿದರು. ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಇಂರ‍್ಯಾಕ್ಟ್ ಸದಸ್ಯರ ಎಲ್ಲಾ ಚಟುವಟಿಕೆಗಳಿಗೂ ಸಹಕಾರ ನೀಡುವ ಭರವಸೆ ನೀಡಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಡಾ. ಚೇತನ್ ಹಾಗೂ ಸಂಚಾಲಕಿ ವಿನಿತ ಉಪಸ್ಥಿತರಿದ್ದರು ವಿದ್ಯಾರ್ಥಿನಿ ಪುನರ್ವ ಪ್ರಾರ್ಥಿಸಿ, ದುವಿತ ಸ್ವಾಗತಿಸಿ, ಸಿರೇನಾ ದೇಶಮ್ಮ ವಂದಿಸಿದರು. ತಾನ್ಯಾ ಜೋಸೆಫ್ ನಿರೂಪಣೆ ಮಾಡಿದರು.