ಜು.04 ರಂದು ಜವಾಹರ್ ನವೋದಯ ವಿದ್ಯಾಲಯದ ವಿವಿಧ ಹುದ್ದೆಗಳಿಗೆ ಸಂದರ್ಶನ
admincoorgdaily

ಮಡಿಕೇರಿ ಜೂ.25:-ತಾಲ್ಲೂಕಿನ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ವತಿಯಿಂದ 2026-27ನೇ ಶೈಕ್ಷಣಿಕ ವರ್ಷಕ್ಕೆ ಗುತ್ತಿಗೆ ಮತ್ತು ದಿನಗೂಲಿ ಆಧಾರದ ಮೇಲೆ ಪಿಜಿಟಿ ಭೂಗೋಳ, ಟಿಜಿಟಿ ಸಮಾಜ ವಿಜ್ಞಾನ, ಟಿಜಿಟಿ ಸಂಗೀತ, ಜೆಎಸ್‍ಎ, ಎಂಟಿಎಸ್, ಮೇಟ್ರನ್, ಸೆಕ್ಯುರಿಟಿ ಗಾರ್ಡ್ ಹುದ್ದೆಗಳನ್ನು ಭರ್ತಿ ಮಾಡಲು ಕೊಡಗು ಜಿಲ್ಲೆಯ ಮಡಿಕೇರಿಯ ಗಾಳಿಬೀಡಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಜುಲೈ, 04 ರಂದು ಬೆಳಗ್ಗೆ 10:30 ಕ್ಕೆ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿ ಆಹ್ವಾನಿಸಲಾಗಿದೆ.
ಅರ್ಹತಾ ಮಾನದಂಡಗಳು: ಕೇಂದ್ರ ಸರ್ಕಾರದ ಶಿಕ್ಷಕರ ನೇಮಕಾತಿಯ ಪ್ರಕಾರ. ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾನದಂಡಗಳ ಪ್ರಕಾರ. ಎನ್‍ವಿಎಸ್‍ನ ನೇಮಕಾತಿ ನಿಯಮಗಳ ಪ್ರಕಾರ. ಹೆಚ್ಚಿನ ಮಾಹಿತಿಗೆ ದೂ.ಸಂ. 9611862835, 9448215623 ಮತ್ತು 9449379654 ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.