ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಹ್ವಾನ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಹ್ವಾನ

ಮಡಿಕೇರಿ ಜ.09:-ಕೊಡಗು ಜಿಲ್ಲೆಯ 2026-27 ನೇ ಸಾಲಿಗೆ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ “ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲು” ಆಸಕ್ತಿಯುಳ್ಳ ಅನುಭವವುಳ್ಳ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಗೆ (ಎನ್.ಜಿ.ಓ) ಆಸಕ್ತ ಅಭಿವ್ಯಕ್ತಿ ಸ್ವ-ಇಚ್ಛೆ (ಎಕ್ಸ್‍ಪ್ರೆಸನ್ ಆಪ್ ಇಂಟ್ರೆಸ್ಟ್) ಅರ್ಜಿಯನ್ನು ಆಹ್ವಾನಿಸಿದ್ದು, ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ‘ಎಕ್ಸ್‍ಪ್ರೆಸನ್ ಆಪ್ ಇಂಟ್ರೆಸ್ಟ್’ ಅನ್ನು ಜನವರಿ, 30 ರವರೆಗೆ ಕರೆಯಲಾಗಿದ್ದು, ಹೆಚ್ಚಿನ ಮಾಹಿತಿಗೆ https://kppp.karnataka.gov.in/ ಅಲ್ಲಿ ನೋಡಬಹುದಾಗಿದೆ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿಗಳ ಕಛೇರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಮಡಿಕೇರಿ , ಕೊಡಗು ಜಿಲ್ಲೆ ವಿಳಾಸ: dbcskodagu@gmail.com ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಅವರು ತಿಳಿಸಿದ್ದಾರೆ.