Kodagu

ಈಶ ಗ್ರಾಮೋತ್ಸವ: ಆಗಸ್ಟ್ 24ರಂದು ಕುಶಾಲನಗರದಲ್ಲಿ ರೂರಲ್ ಪ್ರೀಮಿಯರ್ ಲೀಗ್ ವಾಲಿಬಾಲ್ ಹಾಗೂ ಥ್ರೋಬಾಲ್ ಪಂದ್ಯಾವಳಿ

admincoorgdaily

ಮಡಿಕೇರಿ: ಈಶ ಫೌಂಡೇಶನ್ ವತಿಯಿಂದ 17ನೇ ಆವೃತ್ತಿಯ ಈಶ ಗ್ರಾಮೋತ್ಸವ ಅಂಗವಾಗಿ ರೂರಲ್ ಪ್ರೀಮಿಯರ್ ಲೀಗ್ ಅನ್ನು ಆ.24ರಂದು ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದೆ ಎಂದು ಫೌಂಡೇಶನ್‌ನ ಸ್ವಯಂ ಸೇವಕ ಎಂ.ಎನ್.ಅಖಿಲ್ ತಿಳಿಸಿದ್ದಾರೆ. ಅಂದು ಬೆಳಗ್ಗೆ 8ಗಂಟೆಗೆ ಕ್ಲಸ್ಟರ್ ವಿಭಾಗದಲ್ಲಿ ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ಕ್ಲಸ್ಟರ್ ಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.

ವಿಭಾಗೀಯ ಮಟ್ಟದ ಪಂದ್ಯಾವಳಿ ಸೆ.7ರಂದು ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ನಡೆಯಲಿದ್ದು, ಅಂತಿಮ ಪಂದ್ಯಾವಳಿ ಸೆ.21 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯಲಿದೆ. ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾಟದ ವಿಜೇತ ತಂಡಕ್ಕೆ ತಲಾ ರೂ.05 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಆಸಕ್ತ ಆಟಗಾರರು 8861642755 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಈ ಪಂದ್ಯಾಟಕ್ಕೆ ಅಂತರಾಷ್ಟ್ರೀಯ, ರಾಜ್ಯಮಟ್ಟದ ಆಟಗಾರರಿಗೆ ಅವಕಾಶವಿಲ್ಲ. ಆಟಗಾರರು ಒಂದು ಗ್ರಾಮ ಪಂಚಾಯಿತಿಗೆ ಸೇರಿರಬೇಕು ಎಂದರು.

 ಥ್ರೋಬಾಲ್ ಆಟಗಾರ್ತಿ ಕೆ.ಎಂ.ಚಂದ್ರಕಲಾ, ಥ್ರೋಬಾಲ್ ಆಟಗಾರ್ತಿ ಕಟ್ಟೆಮನೆ ಮಿಲನ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.