ರಾಜಸ್ಥಾನ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ಸೋಮವಾರಪೇಟೆಯ ಇಶಾ

ರಾಜಸ್ಥಾನ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ಸೋಮವಾರಪೇಟೆಯ ಇಶಾ

ಮಡಿಕೇರಿ:ಸೋಮವಾರಪೇಟೆಯ ಎಂ.ಎ ರುಬೀನಾ ಮತ್ತು ಆಸಿಫ್ ದಂಪತಿಗಳ ಪುತ್ರಿ ಇಶಾ ಎಸ್.ಎ ರಾಜಸ್ಥಾನ ವಿಶ್ವ ವಿದ್ಯಾಲಯದಲ್ಲಿ ಎಂ.ಎ ಪಬ್ಲಿಕ್ ಪಾಲಿಸಿ, ಲಾ ಮತ್ತು ಗವರ್ನಯನ್ಸ್ (MA-Public policy, law and Governance) ವಿದ್ಯಾಭ್ಯಾಸಕ್ಕೆ ಅರ್ಹತೆ ಪಡೆದು ಆಯ್ಕೆಯಾಗಿದ್ದಾಳೆ. ರಾಜಸ್ತಾನ ವಿಶ್ವ ವಿದ್ಯಾಲಯದಲ್ಲಿ ಜುಲೈ 21ನೇ ತಾರೀಖಿನಂದು ನಡೆದ 23 ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸುಮಾರು ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೌನ್ಸ್'ಲಿಂಗ್ ನಲ್ಲಿ ಪಾಲ್ಗೊಂಡಿದ್ದರು.