ಚೆಟ್ಟಳ್ಳಿಯಲ್ಲಿ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದಿಂದ ಅಂತರ ಕೊಡವ ಪೊ್ಮ್ಮಕ್ಕಡ ಥ್ರೋಬಾಲ್ ಪಂದ್ಯಾಟ; ಮಹಿಳೆಯರಿಗಾಗಿನ ಕ್ರೀಡಾಪಂದ್ಯಾವಳಿಗಳು ಭಾಂಧವ್ಯ ವೖದ್ದಿಗೆ ಸಹಕಾರಿ; ವೀಣಾ ಅಚ್ಚಯ್ಯ

Apr 1, 2026 - 19:09
 0  315
ಚೆಟ್ಟಳ್ಳಿಯಲ್ಲಿ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದಿಂದ ಅಂತರ ಕೊಡವ ಪೊ್ಮ್ಮಕ್ಕಡ ಥ್ರೋಬಾಲ್ ಪಂದ್ಯಾಟ;  ಮಹಿಳೆಯರಿಗಾಗಿನ ಕ್ರೀಡಾಪಂದ್ಯಾವಳಿಗಳು ಭಾಂಧವ್ಯ ವೖದ್ದಿಗೆ ಸಹಕಾರಿ; ವೀಣಾ ಅಚ್ಚಯ್ಯ

ಮಡಿಕೇರಿ ಏ.1 - ಕೊಡಗೂ ಸೇರಿದಂತೆ ವಿವಿಧೆಡೆ ಪೊಮ್ಮಕ್ಕಡ ಕೂಟಗಳ ನಡುವೆ ಭಾಂದವ್ಯ ವೃದ್ಧಿ ಹಾಗೂ ಕ್ರೀಡಾಮನೋಭಾವ ಮೂಡಿಸುವ ಉದ್ದೇಶದೊಂದಿಗೆ ಚೆಟ್ಟಳ್ಳಿ ಕೊಡವ ಸಮಾಜದ ಅಧೀನದಲ್ಲಿರುವ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟ ಅಂತರ ಕೊಡವ ಪೊಮ್ಮಕ್ಕಡ ಥ್ರೋಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂರು ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಹೇಳಿದ್ದಾರೆ.

ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ಚೆಟ್ಟಳ್ಳಿ ಕೊಡವ ಸಮಾಜದ ಅಧೀನದಲ್ಲಿರುವ ಜೋಮಾಲೆ ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ವಷ೯ದ ಅಂತರ ಕೊಡವ ಪೊಮ್ಮಕ್ಕಡ ಥ್ರೋಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಥ್ರೋಬಾಲ್ ಪಂದ್ಯಾವಳಿಯ ಮೂಲಕ , ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು ಅವಕಾಶವಾಗುತ್ತದೆ ಎಂದರು. ಎಲ್ಲಾ ಊರುಗಳಲ್ಲಿ ಪೊಮ್ಮಕ್ಕಡ ಕೂಟದ ವತಿಯಿಂದ ಹಲವಾರು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ಬರಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರಿದಂತಾಗುವುದು ಎಂದೂ ವೀಣಾ ಅಚ್ಚಯ್ಯ ನುಡಿದರು.

ಪೊಮ್ಮಕ್ಕಡ ಕೂಟ ಪ್ರಬಲವಾಗಿ ಸಂಘಟಿತವಾಗುತ್ತಿರುವುದೂ ಉತ್ತಮ ಬೆಳವಣಿಗೆಯಾಗಿದೆ ಎಂದೂ ಅವರು ಹಮ್ಮೆ ವ್ಯಕ್ತಪಡಿಸಿದರು. ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ಮಾತನಾಡಿ, ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಇದೇ ಪ್ರಥಮ ಭಾರಿಗೆ ಚೆಟ್ಟಳ್ಳಿಯಲ್ಲಿ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ , ಪಂದ್ಯಾವಳಿಗೆ ಚೆಟ್ಟಳ್ಳಿಯ ಕೊಡವ ಸಮಾಜ ಅಗತ್ಯ ಸಹಕಾರವನ್ನು ನೀಡಿದೆ.

ಪಂದ್ಯಾವಳಿಯಲ್ಲಿ ಬೆಂಗಳೂರು ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸೇರಿದಂತೆ ಕೊಡಗಿನ ವಿವಿಧ ಕೊಡವ ಸಮಾಜಗಳ ಪೊಮ್ಮಕ್ಕಡ ಕೂಟದ 16 ತಂಡಗಳು ಪಾಲ್ಗೊಂಡಿದ್ದು, ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತ್ರತೀಯ ಹಾಗೂ ನಾಲ್ಕನೇ ಸ್ಥಾನ ಪಡೆಯುವ ತಂಡಗಳಿಗೆ ನಗದು ಸೇರಿದಂತೆ ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುವುದು. ಆಟಗಾತಿ೯ಯರಿಗೆ ವೈಯಕ್ತಿಕ ಬಹುಮಾನವನ್ನು ನೀಡಲಾಗುವುದು ಎಂದರು.

 ಪೊಮ್ಮಕ್ಕಡ ಕೂಟದಲ್ಲಿ 60 ಸದಸ್ಯೆಯರಿದ್ದು, ಇದೇ ಪ್ರಥಮ ಬಾರಿಗೆ ಈ ಪಂದ್ಯಾವಳಿ ಆಯೋಜಿಸುವಲ್ಲಿ ಸಫಲರಾಗಿದ್ದೇವೆ. ಜೋಮಾಲೆ ಪೊಮ್ಮಕ್ಕಡ ಕೂಟದ ವತಿಯಿಂದ ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರ ಹಾಗೂ ವೃದ್ಧಾಶ್ರಮ ವಾಸಿಗಳಿಗೆ ಅಗತ್ಯ ನೆರವು ನೀಡುವ ಉದ್ದೇಶವಿದ್ದು ವೈವಿಧ್ಯಮಯ ಕಾಯ೯ಕ್ರಮ ಆಯೋಜಿಸಲಾಗುತ್ತದ ಎಂದೂ ಶೋಭಾಚಂಗಪ್ಪ ನುಡಿದರು.

ಥ್ರೋಬಾಲ್ ಪಂದ್ಯಾವಳಿಯ ಸಡಗರದೊಂದಿಗೆ ಮಹಿಳೆಯರು ತಮ್ಮ ಕ್ರೀಡಾ ಪ್ರತಿಭೆ ತೋರಿದರು. ಈ ಪಂದ್ಯಾವಳಿಯಲ್ಲಿ ವಿವಾಹಿತ ಮಹಿಳೆಯರು ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಬೆಂಗ ಳೂರು, ಮೈಸೂರು ಸೇರಿದಂತೆ ಒಟ್ಟು 16 ತಂಡಗಳು ಪಾಲ್ಗೊಂಡಿದ್ದವು.

ಜೋಮಾಲೆ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಚೋಳಂಡ ಜ್ಯೋತಿ ನಾಣಯ್ಯ, ಕಾರ್ಯದರ್ಶಿ ಅಡಿಕೆರ ಶಾಂತಿ ಮುತ್ತಪ್ಪ, ಖಜಾಂಚಿ ಪುತ್ತರಿರ ಗಂಗು ಅಚ್ಚಯ್ಯ, ಸಹ ಕಾರ್ಯದರ್ಶಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷ ಬಿದ್ದಂಡ ಮಾದಯ್ಯ ಅವರು ಹಾಜರಿದ್ದರು.

 ಪಾಲ್ಗೊಂಡ ತಂಡಗಳು; ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ (ಎರಡು ತಂಡ) ನೆಲಜಿ ಪೊಮ್ಮಕ್ಕಡ ಕೂಟ ಅಮ್ಮತ್ತಿ ಪೂಂದಳಿ ಪೊಮ್ಮಕ್ಕಡ ಕೂಟ, ಮೈಸೂರು ಪೊಮ್ಮಕ್ಕಡ ಕೂಟ, ಟಿ. ಶೆಟ್ಟಿಗೇರಿ ಕೂಟ, ಗುಂಬಳಮಾಡ ಪೊಮ್ಮಕ್ಕಡ ಕೂಟ ಪೊನ್ನಂಪೇಟೆ, ತಲಕಾವೇರಿ ಪೊಮ್ಮಕ್ಕಡ ಕೂಟ ಮೈಸೂರು, ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ, ಬೆಂಗಳೂರು ಪೊಮ್ಮಕ್ಕಡ ಕೂಟ, ಜೋಮಾಲೆ ಕೂಟ ಚೆಟ್ಟಳ್ಳಿ, ಬೇಗೂರು ಪೊಮ್ಮಕ್ಕಡ ಕೂಟ, ಪೊನ್ನಂಪೇಟೆ ಪೊಮ್ಮಕ್ಕಡ ಕೂಟ, ರೈರ‍್ಸ್ ಪೊಮ್ಮಕ್ಕಡ ಕೂಟ ಪೊನ್ನಂಪೇಟೆ ಹಾಗೂ ಮೂರ್ನಾಡು ಪೊಮ್ಮಕ್ಕಡ ಕೂಟ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0