"ಐ.ಟಿ.ಐ ಗ್ರೇಡಿಂಗ್ ನಲ್ಲಿ" ಭಾಗಮಂಡಲದ ಕೆವಿಜಿ ಐಟಿಐ ಕಾಲೇಜು ಕೊಡಗು ಜಿಲ್ಲೆಗೆ ಪ್ರಥಮ
ಮಡಿಕೇರಿ:2025-26ನೇ ಸಾಲಿನಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ಮಟ್ಟದಲ್ಲಿ ಐ.ಟಿ.ಐ ಸಂಸ್ಥೆಗಳ ಗುಣಮಟ್ಟ ವಿದ್ಯಾರ್ಥಿಗಳ ದಾಖಲಾತಿ,ಶೈಕ್ಷಣಿಕ ಗುಣಮಟ್ಟ,ಹಾಗೂ ಫಲಿತಾಂಶವನ್ನು ಪರಿಗಣಿಸಿ "ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಇಲಾಖೆ"ಯು ನಡೆಸಿದ " ಐ.ಟಿ.ಐ ಗ್ರೇಡಿಂಗ್ ನಲ್ಲಿ" ಭಾಗಮಂಡಲದ ಅನುದಾನಿತ ಕೆವಿಜಿ ಐಟಿಐ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.