ಕಡಂಗ: ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಭವ್ಯ ಶ್ರೀ ಆಯ್ಕೆ
ಕಡಂಗ:ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ್ ಪಕ್ವಾಡ್ ಹಾಗೂ ನೂತನ ಎಸ್.ಡಿ.ಎಂ.ಸಿ ರಚನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದ ಫಾತಿಮಾ ವಿ.ಇ ವಹಿಸಿದ್ದರು. ಮುಖ್ಯಅತಿಥಿಗಳಾಗಿ ನರಿಯಂಡದ ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೀರ್, ಸ್ಥಳೀಯ ಆಯುಷ್ಯ ವೈದ್ಯಾಧಿಕಾರಿಗಳಾದ ಶ್ರೀಮತಿ ಶುಭ ಭಾಗವಹಿಸಿದ್ದರು. ಉತ್ತಮ ಆರೋಗ್ಯಕ್ಕೆ ಜೀವನ ಶೈಲಿ, ಆಹಾರ ಪದಾರ್ಥಗಳು, ಸ್ಥಳೀಯವಾಗಿ ದೊರಕುವ ಹಣ್ಣು ಹಂಪಲುಗಳ ಬಳಕೆ ಆಹಾರದಲ್ಲಿರುವ ವಿಟಮಿನ್ ಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಮಹತ್ವವನ್ನು ತಿಳಿಸಿಕೊಟ್ಟರು.
ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶ್ರೀಮತಿ ಭವ್ಯಶ್ರೀ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಆಯುಷ್ ಸಿಬ್ಬಂದಿಗಳಾದ ಶಿಲ್ಪಾ ಮತ್ತು ಲತಾ, ಪೋಷಕರು,ಸುಮಾರು 70 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಭಾರ ಮುಖ್ಯ ಶಿಕ್ಷರಾದ ಶ್ರೀಮತಿ ವಿಮಲಾ ಕೆ. ಎಂ. ರವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು.ಶಿಕ್ಷಕರಾದ ಶ್ರೀಮತಿ ಬಬಿತರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿ ನಂತರ ಎಲ್ಲರನ್ನು ವಂದಿಸಿದರು. ವರದಿ: ನೌಫಲ್