ಕಗ್ಗೋಡ್ಲು:25ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Dec 5, 2025 - 20:47
 0  463
ಕಗ್ಗೋಡ್ಲು:25ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

ಮಡಿಕೇರಿ:ತಾಲೂಕಿನ ಕಗ್ಗೋಡ್ಲುವಿನ ಹೂಕಾಡು ಪೈಸಾರಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಭೇಟಿ ನೀಡಿದರು. ಇಲ್ಲಿಯ ಪ್ರಸಿದ್ಧ ಕರಿ ಚಾಮುಂಡಿ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಶನಿವಾರ ನಡೆಯಲಿದ್ದು, ಶಾಸಕರು ಕಾರ್ಯನಿಮಿತ್ತ ಕ್ಷೇತ್ರದಲ್ಲಿ ಅಲಭ್ಯರಿರುವ ಕಾರಣ, ಇಂದೇ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.    

ಬಳಿಕ ಶಾಸಕರ ಅನುದಾನದ ₹ 25 ಲಕ್ಷಗಳಲ್ಲಿ ಕೈಗೆತ್ತಿಕೊಂಡಿರುವ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕರು, ಎಲ್ಲರಿಗೆ ಶುಭ ಕೋರಿದರು. ಬಳಿಕ ಮೇಕ್ ಏರಿಯ ಶಾಲೆ ಎದುರಿನ ಮುಖ್ಯ ರಸ್ತೆ ಬಳಿ, ನೂತನವಾಗಿ ಶಾಸಕರ ಅನುದಾನದಲ್ಲಿ ನಿರ್ಮಾಣ ಆಗುತ್ತಿರುವ ಬಸ್ ತಂಗುದಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. 

ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಹಾಕತ್ತುರು ವಲಯ ಅಧ್ಯಕ್ಷರು ಪಿಯೂಸ್, ಮೇಕೇರಿ ವಲಯ ಪೊನ್ನಪ್ಪ, ಶಾರದಾ, ಜಗತ್, ವಿಜಯಲಕ್ಷ್ಮಿ , ಬೂತ್ ಅಧ್ಯಕ್ಷರು ಕೊರಗಪ್ಪ, ಶಂಕರ ಪೂಜಾರಿ, ತಿಮ್ಮಯ್ಯ, ಪಂಚಾಯಿತಿ ಸದಸ್ಯರು ಹನೀಫ್, ಸೂರಜ್ ಹೊಸೂರು, ಉದಯ ಅಯ್ಯಪ್ಪ, ಸಾಕಿಬ್, ಪ್ರಕಾಶ್, ಆಪ್ರು ರವೀಂದ್ರ, ರತ್ನಕರ್ ರೈ,ಅಭಿನ್ ರೈ ಹಾಗೂ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0