ಕೈಗ್ ಹಾಕಿ ಕಪ್-2025: ಲಾಂಛನ ಬಿಡುಗಡೆ ಮಾಡಿದ ಶಾಸಕ ಎಎಸ್ ಪೊನ್ನಣ್ಣ

Nov 22, 2025 - 21:03
 0  307
ಕೈಗ್ ಹಾಕಿ ಕಪ್-2025:  ಲಾಂಛನ ಬಿಡುಗಡೆ ಮಾಡಿದ ಶಾಸಕ ಎಎಸ್ ಪೊನ್ನಣ್ಣ

ಗೋಣಿಕೊಪ್ಪ: ಕೈಗ್ ಹಾಕಿ ಕಪ್-2025 ರ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರದ ಎ.ಎಸ್ ಪೊನ್ನಣ್ಣ ರವರು ಭಾಗವಹಿಸಿದರು.

ಗೋಣಿಕೊಪ್ಪಲುವಿನ ಅಂತುರ ಕೂರ್ಗ್ ಸಭಾಂಗಣದಲ್ಲಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಮಾನ್ಯ ಶಾಸಕರು, ಹಾಕಿ ಕ್ರೀಡೆಗೆ ಪ್ರಸಿದ್ಧ ವಾಗಿರುವ ಕೊಡಗಿನಲ್ಲಿ ಇಂತಹ ಟೂರ್ನಮೆಂಟ್ ಗಳು ನಡೆಯುವುದರಿಂದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಒದಗಿದಂತಾಗುತ್ತದೆ. ಮುಂಬರುವ ಸಾಲಿನ ಈ ಪಂದ್ಯಾಟವು ಅತ್ಯಂತ ಯಶಸ್ಸು ಕಾಣುವುದರೊಂದಿಗೆ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರು ಬಾಳೆಯಡ ಸುಬ್ರಮಣಿ, ಶ್ರೀಮಂತ್, ಮುತ್ತಣ್ಣ, ಸುದೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0