Kodagu

ಕಲ್ಲುಬಾಣೆ:ಶೈಖುಲ್ ಜಾಮಿಯಾ ಆಲಿಕುಟ್ಟಿ ಉಸ್ತಾದ್ ಅನುಸ್ಮರಣೆ

admincoorgdaily

ಕಲ್ಲುಬಾಣೆ:ಶೈಖುಲ್ ಜಾಮಿಯಾ ಆಲಿಕುಟ್ಟಿ ಉಸ್ತಾದ್ ಅನುಸ್ಮರಣೆ

ಕಲ್ಲುಬಾಣೆ:ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪಂಡಿತ ಸಭೆಯಲ್ಲಿ ಕಳೆದ 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಮುಸ್ಲಿಂ ಸಮುದಾಯದ ನೇತೃತ್ವ ವಹಿಸಿದ್ದ ಶೈಖುನಾ ಶೈಖುಲ್ ಜಾಮಿಯಾ ಆಲಿಕುಟ್ಟಿ ಉಸ್ತಾದ್ ಅವರ ಅನುಸ್ಮರಣೆ ದಾರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸಾದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಹ್ಲೀಲ್ ಸಮರ್ಪಣೆ ಮತ್ತು ಕುರ್‌ಆನ್ ಪಾರಾಯಣ ನಡೆಸಿ ಉಸ್ತಾದ್‌ಗಾಗಿ ಪ್ರತ್ಯೇಕ ಪ್ರಾರ್ಥನಾ ಸಂಗಮದಲ್ಲಿ ಭಾಗವಹಿಸಿದರು. ಮದರಸಾ ಪ್ರಾಂಶುಪಾಲ ಎಂ. ತಮ್ಲೀಖ್ ದಾರಿಮಿ ಮತ್ತು ಸಹ ಪ್ರಾಂಶುಪಾಲ ಯು.ಪಿ. ಮುಸ್ತಫಾ ಫೈಝಿ ಅವರು ಶೈಖುನಾ ಉಸ್ತಾದ್ ಅವರನ್ನು ಅನುಸ್ಮರಿಸಿ ಮಾತನಾಡಿದರು. ಖತೀಬ್ ರಝಾಕ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿದರು.

 ಸ್ಟಾಫ್ ಕಾರ್ಯದರ್ಶಿ ಅಬ್ದುಲ್ ಹಕೀಂ ಹಿಶಾಮಿ ಸ್ವಾಗತಿಸಿದರು. ಎನ್. ಉಮರ್ ಮುಸ್ಲಿಯಾರ್ ವಂದಿಸಿದರು. ಹಮೀದ್ ಅಝ್ಹರಿ ದಿಕ್ರ್ ಪಠಣಕ್ಕೆ ನೇತೃತ್ವ ವಹಿಸಿದರು. ಪ್ರಾರ್ಥನಾ ಸಂಗಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಅಫ್ಸಲ್ ಪಿ.ಕೆ., ಕಾರ್ಯದರ್ಶಿ ಫನ್ಸೀರ್, ಸದಸ್ಯರಾದ ನೌಷಾದ್, ಶಫೀಕ್ ಹಾಗೂ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಶಿಹಾಬ್, ಕಾರ್ಯದರ್ಶಿ ಅಫ್ಸಲ್ ಮತ್ತು ಇತರರು ಭಾಗವಹಿಸಿದರು.