Kodagu

ಕಲ್ಲುಬಾಯ್ಸ್ ದಿ.ಎಕೆ ಸುಬ್ಬಯ್ಯ ಮೆಮೋರಿಯಲ್ ಕಪ್ ಫುಟ್ಬಾಲ್ ಪಂದ್ಯಾವಳಿ ಲೋಗೋ ಬಿಡುಗಡೆ ಮಾಡಿದ ಶಾಸಕ ಎಎಸ್ ‌ಪೊನ್ನಣ್ಣ

admincoorgdaily

ವಿರಾಜಪೇಟೆ:ಕಲ್ಲುಬಾಯ್ಸ್ ವತಿಯಿಂದ ಮುಂಬರುವ ನವೆಂಬರ್ 20,21,22,23 ರಂದು ಆಯೋಜಿಸಿರುವ ದಿವಂಗತ ಎ.ಕೆ ಸುಬ್ಬಯ್ಯ ಮೆಮೋರಿಯಲ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಲಾಂಛನ ಬಿಡುಗಡೆಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.

 ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಕಲ್ಲು ಬಾಯ್ಸ್ ಸಂಘಟನೆಯ ಆಯೋಜಕರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು. ಲಾಂಛನ ಬಿಡುಗಡೆಗೊಳಿಸಿ ಪಂದ್ಯಾವಳಿಗೆ ಶುಭ ಕೋರಿದ ಶಾಸಕರು, ದಿವಂಗತ ಎ.ಕೆ ಸುಬ್ಬಯ್ಯರವರ ಸ್ಮರಣಾರ್ಥ ನಡೆಯುವ ಈ ಪಂದ್ಯಾವಳಿಯ ಎಲ್ಲಾ ಪಂದ್ಯಗಳಿಗೆ ಶುಭವನ್ನು ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಕಾರ್ಯಕ್ರಮ ಆಯೋಜಕರು, ಸಲಾಂ, ಜಾಫರ್, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಸದಸ್ಯರು ರಾಫಿ, ಆರ್.ಕೆ ಸಲಾಂ, ಮತೀನ್, ರಾಜೇಶ್ , ಕೊಲ್ಲೀರ ಬೋಪಣ್ಣ, ನಾಸಿರ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.