ವಿ.ಬಾಡಗ ಶಾಲಾ ಮಕ್ಕಳಿಗೆ ಕಂಜಿ ತಂಡ ಪೂವಣ್ಣ ದಂಪತಿಯಿಂದ ವಿದ್ಯಾಸಾಮಗ್ರಿ ವಿತರಣೆ ಹಾಗೂ ಅನ್ನದಾನ
ವಿರಾಜಪೇಟೆ: ವಿ ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕಂಜಿತಂಡ ಗಿಣಿ ಮೊಣ್ಣಪ್ಪ ಅವರ ಸುಪುತ್ರರಾದ ಕಂಜಿತಂಡ ಪೂವಣ್ಣ ಮತ್ತು ದೇಚಿ ಪೂವಣ್ಣ ದಂಪತಿಗಳು ಶಾಲಾ ಮಕ್ಕಳಿಗೆ ಒಂದು ವರ್ಷಕ್ಕೆ ಅಗತ್ಯವಿರುವ ನೋಟ್ ಬುಕ್ ಮತ್ತು ಲೇಖನ ಸಾಮಾಗ್ರಿಗಳನ್ನು ವಿತರಿಸಿದರು.
ದಂಪತಿಗಳು ಕೇವಲ ವಿದ್ಯಾಸಾಮಗ್ರಿಗೆ ಸೀಮಿತವಾಗದೆ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ವಿತರಿಸಿ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ವಿದ್ಯಾದಾನದೊಂದಿಗೆ ಅನ್ನದಾನವೂ ನಡೆದ ಈ ಕಾರ್ಯಕ್ರಮ ಮಕ್ಕಳಲ್ಲಿ ಸಂತಸ ಮೂಡಿಸಿತು.
ತಮ್ಮ ತಂದೆ ಕಂಜಿತಂಡ ಗಿಣ ಮೊಣ್ಣಪ್ಪ ಅವರು ಅಧ್ಯಕ್ಷರಾಗಿರುವ ಶಾಲಾ ಹಳೆಯ ವಿದ್ಯಾರ್ಥಿಗಳ ಸಂಘದ ಮೂಲಕ ತಾವು ಓದಿದ ಶಾಲೆಗೆ ಹಿಂತಿರುಗಿ ಕೊಡುಗೆ ನೀಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಈ ಸತ್ಕಾರ್ಯಕ್ಕೆ ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಶಾಲೆಯ ಮುಖ್ಯೊಪದ್ಯಾಯರಾದ ಕೆ.ಸಿ. ಗೀತಾಂಜಲಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
