Kodagu

ನಾಪೋಕ್ಲುವಿನ ಬೇತು ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ

admincoorgdaily

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲುವಿನ ಬೇತು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕರಾದ ಬಿ. ಪಿ. ಮಮತ ಅವರು ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಭಾಷಣ, ಕನ್ನಡ ಹಾಡು, ಛಧ್ಮವೇಷ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ಶಾಲೆಯ ಹಿರಿಯ ಶಿಕ್ಷಕಿ ಬಿ ಬಿ ಸಾವಿತ್ರಿ, ಅತಿಥಿ ಶಿಕ್ಷಕಿಯರಾದ ರಹಮತ್ ಪಿ. ಎ, ರೇಖಾ ಬಿ.ಆರ್ ಹಾಗೂ ಮಕ್ಕಳು ಹಾಜರಿದ್ದರು.