ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕನ್ನಡ ಭಾಷಣ ಸ್ಪರ್ಧೆ
ಕುಶಾಲನಗರ : ಕೂಡಿಗೆ ಆಂಗ್ಲ ಮಾಧ್ಯಮ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕನ್ನಡ ಭಾಷಣ ಸ್ಪರ್ಧೆಯನ್ನು ಕೊಡಗು ಕರವೇ ವತಿಯಿಂದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಭಾರತಿಯವರು ವಹಿಸಿದ್ದರು.
ಶಾಲೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಜ್ಯೋತಿ ಕುದುಪಜೆ ಅವರು ಕುಶಾಲನಗರ ತಾಲೂಕು ಅಧ್ಯಕ್ಷರಾದ ಅಣ್ಣಯ್ಯನವರು ಹಾಗೂ ಮಹಿಳಾ ಅಧ್ಯಕ್ಷರಾದ ರೂಪ ಹಾನಗಲ್ ರವರು ಶಾಲು ಫಲ ಪುಷ್ಪ ಅರ್ಪಿಸಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರೌಢಶಾಲಾ ಮಕ್ಕಳಿಗೆ ವಿದ್ಯಾರ್ಥಿಗಳಾಗಿ ಕನ್ನಡಕ್ಕೆ ನಮ್ಮ ಸಂಕಲ್ಪ ಎಂಬ ವಿಷಯವಾಗಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.
ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಪ್ರಕೃತಿ ಎಸ್ ಪಿ. ಪ್ರಥಮ ಸ್ಥಾನ ,ದ್ವಿತೀಯ ಸ್ಥಾನ ಸಾನ್ವಿ ಪೂವಮ್ಮ ,ಹಾಗೂ ಕುಮಾರಿ ಜೀವಿತ ತೃತೀಯ ಸ್ಥಾನ ಪಡೆದು ವಿಜೇತರಾದರು.ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನೆನಪಿನ ಕಾಣಿಕೆ ಹಾಗೂ ಬಹುಮಾನವನ್ನು ವಿತರಿಸಲಾಯಿತು. ಹತ್ತು ವರ್ಷಗಳಿಂದ ನಿರಂತರವಾಗಿ ಶಾಲೆ ಮತ್ತು ಶಾಲಾ ಆವರಣವನ್ನು ಶುಚಿಯಾಗಿರಿಸಿ ಶಾಲಾ ಮಕ್ಕಳ ಆರೋಗ್ಯವನ್ನು ಕಾಪಾಡಿಕೊಂಡು ಬಂದ ಅಲ್ಲಿನ ಸ್ವಚ್ಛತಾ ಸಿಬ್ಬಂದಧಿಗಳಾದ ಶ್ರೀಮತಿ ಸುಧಾ ಶ್ರೀಮತಿ ರಾಧಾ ಆರ್ ಮತ್ತು ಶ್ರೀ ಶಿವಕುಮಾರ್ ಅವರಿಗೆ ಶಾಲು, ಪೇಟ ಹಾಗೂ ಫಲ ಅರ್ಪಿಸಿ ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಕೊಡಗು ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಕುದುಪಜೆ,ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ ಜಿಲ್ಲಾ ಉಪಾಧ್ಯಕ್ಷರಾದ ರಾಜೇಶ್.
ಜಿಲ್ಲಾ ಸಂಚಾಲಕರಾದ ಗೋವಿಂದರಾಜ್ ದಾಸ್ ಟೈಲರ್ಸ್ ಘಟಕದ ಅಧ್ಯಕ್ಷರಾದ ಶ್ರೀ ಕೃಷ್ಣರವರು ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ಪೂರ್ಣಿಮಾ ತಾಲೂಕು ಅಧ್ಯಕ್ಷರಾದ ಅಣ್ಣಯ್ಯ ಮಹಿಳಾ ತಾಲೂಕು ಅಧ್ಯಕ್ಷರಾದ ರೂಪ ಹಾನಗಲ್ ತಾಲೂಕು ಗೌರವ ಅಧ್ಯಕ್ಷರಾದ ಧನರಾಜ್ ರವರು ಖಜಾಂಜಿಗಳಾದ ರೊನಾಲ್ಡರವರು ಕಾರ್ಯದರ್ಶಿಗಳಾದ ರಾಕೇಶ್. ಹೋಬಳಿ ಅಧ್ಯಕ್ಷರಾದ ಶ್ರೀಮತಿ ಗೀತಾ ರಾಜೇಶ್, ಶ್ರೀಮತಿ ಪುಷ್ಪ ಶ್ರೀಮತಿ ಯಶೋಧ ಹಾಜರಿದ್ದರು.. ಶಿಕ್ಷಕಿಯವರಾದ ಶ್ರೀಮತಿ ಅಮೃತ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
