Kodagu

ಕನ್ನಡ ಶಿಕ್ಷಕಿ ಪಿ.ಎಸ್. ಭವ್ಯ ಅವರಿಗೆ ಸನ್ಮಾನ

admincoorgdaily

ಕನ್ನಡ ಶಿಕ್ಷಕಿ ಪಿ.ಎಸ್. ಭವ್ಯ ಅವರಿಗೆ  ಸನ್ಮಾನ

ವಿರಾಜಪೇಟೆ: ಸರಕಾರಿ ಪ್ರೌಢಶಾಲೆ, ಬಿಳುಗುಂದದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ಜರುಗಿತು. 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ಶಿಲ್ಪಾ ಪಿ.ಬಿ. ಅವರಿಗೆ ಮಾರ್ಗದರ್ಶನ ನೀಡಿದ ಕನ್ನಡ ಶಿಕ್ಷಕಿ ಪಿ.ಎಸ್. ಭವ್ಯ ಅವರನ್ನು ಎಸ್.ಡಿ.ಎಂ.ಸಿ ಮತ್ತು ಶಾಲಾ ಸಿಬ್ಬಂದಿ ವತಿಯಿಂದ ಸನ್ಮಾನಿಸಲಾಯಿತು.

ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಕನ್ನಡದಲ್ಲಿ 100 ಕ್ಕಿಂತ ಹೆಚ್ಚು ಅಂಕ ಗಳಿಸುವಂತೆ ಮಾಡಿದ ಶಿಕ್ಷಕಿಯ ಸೇವೆಯನ್ನು ಗುರುತಿಸಿ, ಶಾಲು ಹೊದಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪೊನ್ನಂಪೇಟೆ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯು ಭವ್ಯ ಅವರು ಈ ಸಾಧನೆಗಾಗಿ ಸನ್ಮಾನಿತರಾಗಿದ್ದಾರೆ.

 ಈ ಸಂದರ್ಭ ಎಸ್.ಡಿ.ಎಂ.ಸಿ ಅಧ್ಯಕ್ಷ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಡಾ. ರವಿ.ಆರ್, ಅತಿಥಿಗಳಾದ ನಗರಾಜ್, ರಾಜೇಶ್, ಎಸ್.ಡಿ.ಪಿ.ಸಿ ಸದಸ್ಯ ರಶೀದ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕಿ ಅರುಣ್ ಆನ್ಸಿ ಡಿಸೋಜಾ ಅವರು ಭವ್ಯ ಅವರ ಶ್ರಮವನ್ನು ಕೊಂಡಾಡಿದರು. ಈ ಸಂದರ್ಭ ಶಿಕ್ಷಕರಾದ ಲೀಲಾವತಿ ವಿ.ಕೆ, ಲೀನಾ ಎಸ್.ಜಿ, ಅನಿತಾ ಎಸ್.ಡಿ, ಸವಿತಾ ಮಹದೇವ್ ನಾಯ್ಕ್, ರೂಪಾ ಲೋಕೇಶ್ ಹಾಜರಿದ್ದರು.