ಕರಡಿಗೋಡು; ಶ್ರೀ ಬಸವೇಶ್ವರ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

Mar 30, 2026 - 23:17
 0  139
ಕರಡಿಗೋಡು; ಶ್ರೀ ಬಸವೇಶ್ವರ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿದ ಶಾಸಕ ಎಎಸ್ ಪೊನ್ನಣ್ಣ

ಸಿದ್ದಾಪುರ;ಗ್ರಾಮದ ಕರಡಿಗೋಡಿನಲ್ಲಿ ನಡೆಯುವ ವಾರ್ಷಿಕ ಶ್ರೀ ಬಸವೇಶ್ವರ ಹಬ್ಬದ ಉತ್ಸವದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.

 ತಾವು ಶಾಸಕರಾಗಿ ಆಯ್ಕೆಯಾದ ಬಳಿಕ ಸತತ ಮೂರನೇ ವರ್ಷ ಸಹ ಶಾಸಕರು ಉತ್ಸವದ ಸಂದರ್ಭದಲ್ಲಿ ಶ್ರೀದೇವರ ಸನ್ನಿಧಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಿದ್ದಾರೆ. ಬಸವೇಶ್ವರ ದೇವರ ಮಹಾಪೂಜೆ ಸಂದರ್ಭ ಆಗಮಿಸಿದ ಶಾಸಕರು ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು.

 ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರು ಪ್ರತೀಶ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಕುಲಚಂಡ ಪ್ರಮೋದ್ ಗಣಪತಿ, ಪಕ್ಷದ ಮುಖಂಡರು ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಮಲ್ದಾರೆ ಪಂಚಾಯಿತಿ ಅಧ್ಯಕ್ಷರು ಮಾಲತಿ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0