ಮಡಿಕೇರಿ ಲಯನ್ಸ್ ಕ್ಲಬ್ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್
ಮಡಿಕೇರಿ, ಜುಲೈ 26: ಲಯನ್ಸ್ ಕ್ಲಬ್ ಮಡಿಕೇರಿ ವತಿಯಿಂದ ಮಡಿಕೇರಿಯ ಯುದ್ಧ ಸ್ಮಾರಕದಲ್ಲಿ ದೇಶದ ಸೇವೆಗಾಗಿ ತಮ್ಮ ಅತ್ಯುನ್ನತ ಬಲಿದಾನ ನೀಡಿದ ವೀರ ಯೋಧರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಅನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್ ಎಲ್.ಮಾತನಾಡಿ, ಭಾರತೀಯ ಸಶಸ್ತ್ರ ಪಡೆಗಳ ಅಪ್ರತಿಮ ಧೈರ್ಯ, ಶೌರ್ಯ ಮತ್ತು ದೇಶಭಕ್ತಿ ಸದಾ ಸ್ಮರಣೀಯ, ಕಾರ್ಗಿಲ್ ವೀರರ ತ್ಯಾಗವು ಮುಂದಿನ ಪೀಳಿಗೆಗೂ ರಾಷ್ಟ್ರೀಯ ಏಕತೆ ಮತ್ತು ಸೇವೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಸದಾ ಸ್ಪೂರ್ತಿಯಾಗಿರುತ್ತದೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಸದಸ್ಯ ಬೊಳ್ಳಪ್ಪ ಕೆ. ಎ. ಅವರು ಕಾರ್ಗಿಲ್ ಯುದ್ಧದ ಐತಿಹಾಸಿಕ ಮಹತ್ವ, ಭಾರತೀಯ ಸೇನೆ ಎದುರಿಸಿದ ಸವಾಲುಗಳು ಹಾಗೂ ಯುದ್ಧದ ಸಮಯದಲ್ಲಿ ಯೋಧರು ಮೆರೆದ ಸಾಹಸ ಮತ್ತು ದೃಢಸಂಕಲ್ಪದ ಕುರಿತು ಮಹತ್ವದ ಮಾಹಿತಿ ನೀಡಿದರು.
ಕ್ಲಬ್‌ನ ಕಾರ್ಯದರ್ಶಿ ಮಧುಕರ್ ಕೆ., ಕೋಶಾಧಿಕಾರಿ ನವೀನ್ ಅಂಬೆಕಲ್, ನಿರ್ದೇಶಕರಾದ ಜೆ. ವಿ. ಕೋಟಿ, ಬೊಳ್ಳಪ್ಪ, ವಲಯ ಅಧ್ಯಕ್ಷರಾದ ಲಯನ್ ಮದನ್ ಮಾದಯ್ಯ, ದಾಮೋದರ ಕೆ. ಕೆ., ರವಿ ಎನ್. ಬಿ., ಜೆ. ವಿ. ಕೋಟಿ, ನಾಚಪ್ಪ ಎಮ್. ಕೆ., ಸಂತೋಷ್ ಅನ್ವೇಕರ್, ಸತೀಶ್ ರೈ ಪಿ. ಕೆ., ನಾಗೇಂದ್ರ ಎಮ್. ಪಿ., ದಿನೇಶ್ ರಾವ್ ಎ. ಕೆ., ಗೀತಾ ಮಧುಕರ್, ಪ್ರತಿಮಾ ರವಿ, ಜಯಶೀಲ ಪ್ರಕಾಶ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದು ಹುತಾತ್ಮರಿಗೆ ಭಾವಪೂರ್ಣ ನಮನ ಸಲ್ಲಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
