ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ: ಹುತಾತ್ಮರ ಸ್ಮಾರಕ್ಕೆ ಪುಷ್ಪನಮನ

Jul 27, 2026 - 12:59
 0  47
ವಿರಾಜಪೇಟೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ:  ಹುತಾತ್ಮರ ಸ್ಮಾರಕ್ಕೆ ಪುಷ್ಪನಮನ

ವಿರಾಜಪೇಟೆ: ಕಾರ್ಗಿಲ್ ಯುದ್ದದಲ್ಲಿ ನಮ್ಮ ಅನೇಕ ವೀರ ಯೋಧರು ಹುತಾತ್ಮರಾಗಿದ್ದು ದೇಶಕ್ಕಾಗಿ ಅವರ ಬಲಿದಾನ ಅತ್ಯಂತ ಹಿರಿದು. ಆದರಿಂದ ಆ ದಿನದ ಯುದ್ದದಲ್ಲಿ ದಿಟ್ಟ ಪರಾಕ್ರಮ ತೋರಿದ ವೀರ ಯೋಧರನ್ನು ಕಾರ್ಗಿಲ್ ವಿಜಯ ದಿವಸ್‌ದಂದು ನೆನಪಿಸಿಕೊಂಡು ಅವರಿಗೆ ನಮನ ಸಲ್ಲಿಸುವುದು ಎಲ್ಲಾರ ಕರ್ತವ್ಯವಾಗಿದೆ ಎಂದು ವಿರಾಜಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು.

ವಿರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ವಿರಾಜಪೇಟೆ ಮಿನಿ ವಿಧಾನ ಸೌಧದ ಬಳಿ ಇರುವ ಯೋಧರ ಸ್ಮಾರಕದಲ್ಲಿ ಹುತಾತ್ಮ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಿ ಸೈನಿಕರ ತ್ಯಾಗ ಬಲಿದಾನದ ಕುರಿತು ಮಾತನಾಡಿ, ಗಗನ ಮುಟ್ಟುವಂತಿರುವ ಬೆಟ್ಟಗಳ ಸಾಲು, ಕೊರೆಯುವ ಚಳಿ ಇದರ ನಡುವೆ ನಮ್ಮ ಯೋಧರು ದೇಶ ಕಾಯುವ ಕೆಲಸವನ್ನು ಭಾರತಾಂಭೆಯ ಸೇವೆ ಎಂದು ಭಾವಿಸಿ ದೇಶಕ್ಕಾಗಿ ಪ್ರಾಣವನ್ನು ಮುಡಿಪಿಡುತ್ತಾರೆ.

ಅದೇ ರೀತಿ ಪಾಕ್ ದೇಶದ ಕುತಂತ್ರವನ್ನು ಹತ್ತಿಕ್ಕಲು ನಮ್ಮ ಸೇನೆಯ ಯೋಧರು ಕಾರ್ಗಿಲ್ ಹೋರಾಟದಲ್ಲಿ ಕೆಚ್ಚೆದೆಯಿಂದ ಹೋರಾಟ ನಡೆಸಿ ಕಠಿಣವಾದ ಸವಾಲುಗಳನ್ನು ಎದುರಿಸಿ ಹಲವಾರು ಯೋಧರು ಪ್ರಾಣವನ್ನು ಬಲಿದಾನ ನೀಡಿ ಆಕ್ರಮಿಸಿಕೊಂಡಿದ್ದ ದೇಶದ ಭಾಗವನ್ನು ಮರಳಿ ಭಾರತಕ್ಕೆ ತಂದು ಕೊಟ್ಟ ಹೆಮ್ಮೆಯ ದಿನ ಇಂದು. ಇದಕ್ಕಾಗಿ ಅವರ ಶೌರ್ಯಕ್ಕೆ ನಾವು ನಮ್ಮ ನಮನ ಸಲ್ಲಿಸುತ್ತಿದ್ದೆವೆ.

ಇಲ್ಲಿ ನಮ್ಮ ಸೇನೆಯಲ್ಲಿ ವಿಕ್ರಂ ಬಾತ್ರ, ವಿಕ್ರಂ ಪಾಂಡೆಯಂತಹ ಅನೇಕ ವೀರ ಕಲಿಗಳನ್ನು ಹೊಂದಿರುವ ಹೆಮ್ಮೆಯ ಸೇನೆ ನಮ್ಮದು ಎಂದು ಹರೀಶ್ ಹೇಳಿದರು.

ಈ ಸಂದರ್ಭ ತಾಲೂಕು ಆಡಳಿತ ವತಿಯಿಂದ ತಹಸೀಲ್ದಾರ್ ಪಿ. ಪ್ರವೀಣ್ ಕುಮಾರ್ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು.

ಬಳಿಕ ಪೋಲಿಸ್ ಇಲಾಖೆ ವತಿಯಿಂದ ಡಿವೈಎಸ್‌ಪಿ ಮಹೇಶ್ ಕುಮಾರ್, ನೇತೃತ್ವದಲ್ಲಿ, ಪುರಸಭೆ ವತಿಯಿಂದ ಮುಖ್ಯಾಧಿಕಾರಿ ಹಾಗೂ ಮಾಜಿ ಸೈನಿಕರಾದ ಪಟ್ಟಚೆರವಂಡ ನಾಚಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಚಪ್ಪಂಡ ಹರೀಶ್ ಹಾಗೂ ಸಂಘದ ಪದಾಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಗ್ಗಡೆ ಸಮಾಜದ ವತಿಯಿಂದ ಹಿರಿಯರಾದ ಪಡಿಞರಂಡ ಅಯ್ಯಪ್ಪ, ಲಯನ್ಸ್ ಸಂಸ್ಥೆಯವರು, ಹಿಂದೂ ಜಾಗರಣ ವೇದಿಕೆಯ ತಾಲೂಕು ಘಟಕದ ಪ್ರಮುಖರು, ಜೈ ಭಾರತ್ ಅಕಾಡೆಮಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ವಿರಾಜಪೇಟೆ ಆಟೋ ಚಾಲಕರ ಸಂಘ, ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವನ್ನಿಟ್ಟು ನಮನ ಸಲ್ಲಿಸಲಾಯಿತು.

ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದ ಮೈತಾಡಿಯ ಪೆಮ್ಮಂಡ ಕಾವೇರಪ್ಪ ಅವರ ಪತ್ನಿ ಶೋಭ ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು. ಈ ಸಂಧರ್ಭ ವಿರಾಜಪೇಟೆ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್, ಗ್ರಾಮಾಂತರ ಠಾಣಾಧಿಕಾರಿಗಳಾದ ವಾಣಿಶ್ರೀ ಮತ್ತು ಲತಾ, ಎಸ್.ಬಿ.ಐ ಶಾಖಾ ವ್ಯವಸ್ಥಾಪಕರು, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಬಿ.ಆರ್. ಚಂದ್ರಶೇಕರ್, ಅಪ್ಪಯ್ಯ, ಪುಗ್ಗೇರ ನಂದ, ಸಿ.ಎಸ್.ಡಿ ಕ್ಯಾಂಟಿನ್‌ನ ವ್ಯವಸ್ಥಾಪಕ ಡಾಲಿ, ಸಂಘಧ ಮಾಜಿ ಅಧ್ಯಕ್ಷ ಚೇಂದ್ರಿಮಾಡ ಕೆ. ನಂಜಪ್ಪ, ನಿರ್ದೇಶಕರಾದ ಪಟ್ರಪಂಡ ಎಂ. ಕರುಂಬಯ್ಯ, ಪಟ್ರಪಂಡ ಚಂಗಪ್ಪ, ಎಂ.ಕೆ. ಸಲಾಂ ಕಡಂಗ, ಬಾಳೆಕುಟ್ಟೀರ ದಿನಿ ಬೋಪಯ್ಯ, ಕಬ್ಬಚ್ಚೀರ ಬೋಪಣ್ಣ, ಅಣ್ಣಳಮಾಡ ಸುಬ್ಬಯ್ಯ, ಪುರಸಭೆ ಸಿಬ್ಬಂದಿಗಳು, ಎಸ್.ಬಿ.ಐ. ಸಿಬ್ಬಂದಿಗಳು, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0