ಕಾಸರಗೋಡಿನಲ್ಲಿ ಕೇರಳ-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಕೊಡಗಿನ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ

Feb 23, 2026 - 18:06
 0  382
ಕಾಸರಗೋಡಿನಲ್ಲಿ ಕೇರಳ-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಕೊಡಗಿನ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ

ಮಡಿಕೇರಿ ಫೆ.23:-ಕೇರಳ-ಕರ್ನಾಟಕ ರಾಜ್ಯ ಚುಟುಕು ಸಾಹಿತ್ಯ ಸಮ್ಮೇಳನವು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದ ಸಭಾಂಗಣದಲ್ಲಿ ಅದ್ಧೂರಿಯಿಂದ ಜರುಗಿತು. ಚುಟುಕು ಯುಗಾಚಾರ್ಯ ಡಾ| ಎಂ.ಜಿ.ಆರ್. ಅರಸ್ ವೇದಿಕೆಯಲ್ಲಿ ಈ ಸಂದರ್ಭ ಕವಿಗೋಷ್ಠಿ, ಯುವಕವಿಗೋಷ್ಠಿ, ವಿಚಾರಗೋಷ್ಠಿ, “ಕವಿ ಕಾವ್ಯವಿಭೂಷಣ” “ಕವಿ ಕಾವ್ಯ ಕಂಠೀರವ” ಪ್ರಶಸ್ತಿ ಪ್ರದಾನ ನಡೆಯಿತು.

ಈ ಸಂದರ್ಭ ಕೊಡಗಿನ ಚುಟುಕು ಬ್ರಹ್ಮ ಖ್ಯಾತಿಯ ಹಾ.ತಿ.ಜಯಪ್ರಕಾಶ್, ಗೌರಮ್ಮ ದತ್ತಿ ಪ್ರಶಸ್ತಿ, ಅಜೂರ ಪ್ರಶಸ್ತಿ ವಿಜೇತೆ, ಕವಯತ್ರಿ, ಕಥೆಗಾರ್ತಿ ಕೃಪ ದೇವರಾಜ್, ಕಥೆಗಾರ್ತಿ, ಪ್ರಶಸ್ತಿ ವಿಜೇತೆ, ಕವಯತ್ರಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕವಯತ್ರಿ, ಸಾಹಿತಿ ಅರಸಿನಮಕ್ಕಿಯ ರೇಣುಕಾ ಸುಧೀರ್ ರಾಷ್ಟ್ರೀಯ ಕವಿಕಾವ್ಯ ವಿಭೂಷಣ ಪ್ರಶಸ್ತಿ ಸ್ವೀಕಾರ ಮಾಡಿದರು. ಸಮ್ಮೇಳನಕ್ಕೆ ಮೊದಲು ಸರ್ವಾಧ್ಯಕ್ಷ ನಾಡೋಜ ಡಾ. ಕೃಷ್ಣಕುಮಾರ್ ಕೂಡ್ಲು, ಕನ್ನಡ ಭವನದ ಸ್ಥಾಪಕರೂ, ಕೇರಳ ರಾಜ್ಯ-ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರೂ ಆದ ಡಾ| ವಾಮನ್ ರಾವ್ ಬೇಕಲ್ ಅವರುಗಳನ್ನು ಅದ್ಧೂರಿಯಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

 ವೇದಿಕೆ ಸಮಾರಂಭ ಹಾಗೂ ಸಾಂಸ್ಕøತಿಕ ಕಲಾ ವೈಭವ, ಯಕ್ಷಗಾನ ಬಯಲಾಟ , 101 ಮಂದಿಯಿಂದ ಪ್ರಾತಃಕಾಲ ಭಜನೆ ಇತ್ಯಾದಿ ಸನಾತನ ಸಂಸ್ಕೃತಿಯೊಂದಿಗೆ ಪೂರ್ಣದಿನ ಸಾಂಸ್ಕೃತಿಕ ವೈಭವ ನೆಲೆಮಾಡಿತ್ತು. ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಶ್ರೀ ಮಹೇಶ ಸ್ವಾಮಿಗಳು ಹಾಗೂ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0