ಖೇಲೋ ಇಂಡಿಯಾ: ಜಾವಲಿನ್ ಎಸೆತದಲ್ಲಿ ಕೊಡಗಿನ ಅನೀಶ್ ಪ್ರಥಮ
admincoorgdaily

ಶನಿವಾರಸಂತೆ : ಸಮೀಪದ ಶನಿವಾರಸಂತೆ ಕಾವೇರಿ ಪ.ಪೂ.ಅನೀಶ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಇತ್ತೀಚೆಗೆ ಗುಜರಾತಿನ ಆಹಮದಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಖೇಲೋ ಇಂಡಿಯಾದಲ್ಲಿ ರಾಷ್ಟ್ರಮಟ್ಟದ ಜಾವಲಿನ್ ಸ್ಪರ್ಧೆಯಲ್ಲಿ 56.33 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಪಂದ್ಯಾವಳಿಯಲ್ಲಿ ಹೊಸ ದಾಖಲೆ ಮಾಡಿದ್ದಾನೆ ಮತ್ತು ಅನೀಶ್ 110 ಹರ್ಡಲ್ಸ್‌ನಲ್ಲಿ ತೃತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ ಎಂದು ಕಾಲೇಜಿನ ಪ್ರಾಂಶುಪಾಲ ದೇವರಾಜ್ ಮತ್ತು ಉಪನ್ಯಾಸಕರು ತಿಳಿಸಿದ್ದಾರೆ.ಅನೀಶ್ ದೊಡ್ಡಮಳೆ ಗ್ರಾಮದ ಡಿ.ಬಿ. ರಾಜೇಶ್, ವಿಮಲಾ ದಂಪತಿ ಪುತ್ರ.