2025ರಲ್ಲಿ ಕೊಡಗಿಗೆ 43,62,332‌ ಮಂದಿ ಪ್ರವಾಸಿಗರ ಭೇಟಿ

Jan 17, 2026 - 12:39
 0  415
2025ರಲ್ಲಿ ಕೊಡಗಿಗೆ 43,62,332‌ ಮಂದಿ ಪ್ರವಾಸಿಗರ ಭೇಟಿ

(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ:2025ರಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಕುಸಿತ ಕಂಡಿದೆ.2024ಕ್ಕೆ ಹೋಲಿಸಿದರೆ 2025ರಲ್ಲಿ 2,10,458 ಲಕ್ಷ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು,2024ರಲ್ಲಿ ಜಿಲ್ಲೆಗೆ 45,72,790 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು.2025ರಲ್ಲಿ ಕೊಡಗಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅರ್ಧಕೋಟಿ ದಾಟಬಹುದೆಂದು ನೀರಿಕ್ಷಿಸಲಾಗಿತ್ತು.ಆದರೆ ಇದೀಗ 2023ಕ್ಕಿಂತಲೂ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.2023ರಲ್ಲಿ ಜಿಲ್ಲೆಗೆ 43,69,507 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು.2023ಕ್ಕೆ ಹೋಲಿಕೆ ಮಾಡುವಾಗ 2025ರಲ್ಲಿ 7,175 ಮಂದಿ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿದೆ.2025ರಲ್ಲಿ ಜಿಲ್ಲೆಗೆ ವಿದೇಶಿಗರು ಸೇರಿ 43,62,332 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. 631 ಮಂದಿ ವಿದೇಶಿಗರು ಭೇಟಿ ನೀಡಿದ್ದಾರೆ.

ವರ್ಷಾಂತ್ಯದಲ್ಲಿ ಜಿಲ್ಲೆಗೆ ಬಾರದ ಪ್ರವಾಸಿಗರು;

ಜಿಲ್ಲೆಗೆ ಪ್ರತೀ ವರ್ಷಾಂತ್ಯದ ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.ಸಾಮಾನ್ಯವಾಗಿ ಹೊಸ ವರ್ಷ ಆಚರಿಸಲು ಮತ್ತು ಡಿಸೆಂಬರ್ ತಿಂಗಳ ಕೊನೆಯ ವಾರ ಸಾಲು ಸಾಲು ರಜೆಗಳು ಇರುವುದರಿಂದ ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ.ಅದಲ್ಲದೇ ಜಿಲ್ಲೆಯ ಬಹುತೇಕ ರೆಸಾರ್ಟ್, ಹೋಂ ಸ್ಟೇ,ಹೋಟೆಲ್ ಗಳು ಸಂಪೂರ್ಣ ಬುಕ್ ಆಗಿರುತ್ತದೆ.2024ರ ಡಿಸೆಂಬರ್ ತಿಂಗಳಲ್ಲಿ 8,01, 269 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು.ಆದರೆ 2025ರ ಡಿಸೆಂಬರ್ ತಿಂಗಳಲ್ಲಿ 5,52,072 ಮಂದಿ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ.2024ಕ್ಕೆ ಹೋಲಿಸಿದರೆ 2025ರ ಡಿಸೆಂಬರ್ ತಿಂಗಳಲ್ಲಿ 2,49,197 ,ಮಂದಿ ಪ್ರವಾಸಿಗರಲ್ಲಿ ಕುಸಿತ ಕಂಡಿದೆ.2023ರ ಡಿಸೆಂಬರ್ ತಿಂಗಳಲ್ಲಿ 5,82,906 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು.2023ರ ಡಿಸೆಂಬರ್ ಗೆ ಹೋಲಿಸುವುದಾದರೆ 2025ರ ಡಿಸೆಂಬರ್ ತಿಂಗಳಲ್ಲಿ 30,864 ಮಂದಿ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತಕಂಡಿದೆ.2025ರಲ್ಲಿ ಡಿಸೆಂಬರ್ ತಿಂಗಳಲ್ಲಿಯೇ ಅತೀ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿರುವುದು.

ಪ್ರವಾಸಿಗರ ಫೇವರೇಟ್ ಸ್ಪಾಟ್ ರಾಜಸೀಟ್ :

ಜಿಲ್ಲೆಯ‌ ಮಡಿಕೇರಿ ನಗರದಲ್ಲಿರುವ ರಾಜಾಸೀಟ್ ಪ್ರವಾಸಿಗರ ಫೇವರೇಟ್ ಸ್ಪಾಟ್ ಆಗಿದೆ.2023 ರಲ್ಲೂ ಕೂಡ ರಾಜಾಸೀಟ್ ವೀಕ್ಷಣೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು.2024ರಲ್ಲಿ ಕೂಡ ರಾಜಾಸೀಟ್ ಗೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದರು.

ಇದೀಗ 2025ರಲ್ಲಿ 7,63,494 ಮಂದಿ ಪ್ರವಾಸಿಗರು ರಾಜಾಸೀಟ್ ಭೇಟಿ ನೀಡಿದ್ದಾರೆ.2024ಕ್ಕೆ ಹೋಲಿಸುವುದಾದರೆ 2025ರಲ್ಲಿ ರಾಜಾಸೀಟ್ ಗೆ 2,27,785 ಮಂದಿ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿದೆ..ಎರಡನೇ ಸ್ಥಾನದಲ್ಲಿ ಕುಶಾಲನಗರದ ನಿಸರ್ಗಧಾಮ ಸ್ಥಾನ ಪಡೆದಿದೆ.2024ರಲ್ಲಿ ನಿಸರ್ಗಧಾಮಕ್ಕೆ 5,98,605 ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು.

2025ರಲ್ಲಿ 6,06,886 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ.ದುಬಾರೆಗೆ 4,17,076, ಹಾರಂಗಿ 3,34,921,ಅಬ್ಬಿಫಾಲ್ಸ್ 2,81,698, ಜನರಲ್ ತಿಮ್ಮಯ್ಯ ಮ್ಯೂಸಿಯಂ 51,239 ಹಾಗೂ ಮಾಂದಲ್ಪಟ್ಟಿಗೆ 41,697 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

2025ರಲ್ಲಿ ಕೊಡಗಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ:

ಜನವರಿ:324810

ಫೆಬ್ರವರಿ:202613

ಮಾರ್ಚ್: 181041

ಏಪ್ರಿಲ್:386263

ಮೇ :373356

ಜೂನ್;411207

ಜುಲೈ :320543

ಆಗಸ್ಟ್ :317280

ಸೆಪ್ಟೆಂಬರ್: ‌345283

ಅಕ್ಟೋಬರ್:513005

ನವೆಂಬರ್ :434231

 ಡಿಸೆಂಬರ್: 552072

ವಿದೇಶಿಗರು:631

ಒಟ್ಟು ಪ್ರವಾಸಿಗರ ಸಂಖ್ಯೆ:43,62332

ಕಳೆದ ಏಳು ವರ್ಷಗಳಲ್ಲಿ ಕೊಡಗಿಗೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ:

2025:43,62,332

2024:45,72,790

2023:43,69,507

2022:27,29,711

2021:10,15,490

2020:8,43,666

2019:22,69,988

----------

ಕೋಟ್;

ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ.ಇದರಿಂದಾಗಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಹಿನ್ನಡೆಗೆಯಾಗುತ್ತಿದೆ.

ಹೊಸ ವರ್ಷಾ ಚರಣೆಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ವಿಧಿಸಲಾದ ನಿಯಮಗಳು ಪ್ರವಾಸಿಗರನ್ನು ಕೊಡಗಿನತ್ತ ಬಾರದಂತೆ ಮಾಡಿವೆ. ಹೊಸ ವರ್ಷಾಚರಣೆ ಎಂದರೆ ಪ್ರವಾಸಿಗರು ಬರುವುದೇ ಪಾರ್ಟಿ ಮಾಡುವುದಕ್ಕೆ ಅದಕ್ಕೆ ಅನುಮತಿ ಇಲ್ಲವೆಂದಾಗ ಹೀಗಾಗುತ್ತದೆ. ಮುಂದಿನ ವರ್ಷಗಳಲ್ಲಿ ವರ್ಷಾಂತ್ಯದ ಒಂದು ದಿನಕ್ಕಾದರೂ ಸ್ವಲ್ಪ ನಿಯಮಗಳನ್ನು ಸಡಿಲಿಸಬೇಕು. 

ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಕೊಡಗು ಜಿಲ್ಲಾ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0