ಕೊಡಗು ಜಿಲ್ಲೆಯಲ್ಲಿ 27 ಕೆಜಿ ಗಾಂಜಾ, 46 ಗ್ರಾಂ ಸಿಂಥೆಟಿಕ್ ಡ್ರಗ್ ವಶ
admincoorgdaily

ಮಡಿಕೇರಿ: ಜಿಲ್ಲೆಯಲ್ಲಿ ಮಾದಕ ವಸ್ತು ಜಾಲವನ್ನು ಭೇದಿಸುವ ಕಾರ್ಯಾಚರಣೆ ತೀವ್ರಗೊಳಿಸಲಾಗಿದ್ದು, 2026ರವರೆಗೆ ದಾಖಲಾದ ಒಟ್ಟು 215 ಮಾದಕ ವಸ್ತು ಪ್ರಕರಣಗಳಲ್ಲಿ 38 ಪ್ರಕರಣಗಳು ಪೆಡ್ಲರ್‌ಗಳ ವಿರುದ್ಧವಾಗಿವೆ. ಪೊಲೀಸ್ ಕಾರ್ಯಾಚರಣೆಯಲ್ಲಿ 27 ಕೆಜಿ ಗಾಂಜಾ ಹಾಗೂ 46 ಗ್ರಾಂ ಅಪಾಯಕಾರಿ ಸಿಂಥೆಟಿಕ್ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಮಾರಾಟ-ಸಾಗಾಟ ತಡೆಗೆ ಬಿಗಿ ನಿಗಾ, ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಕೊಡಗು ಜಿಲ್ಲಾ ಎಸ್.ಪಿ ಆರ್‌ಎನ್ ಬಿಂದುಮಣಿ ತಿಳಿಸಿದ್ದಾರೆ.