ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘಕ್ಕೆ ಚಾಲನೆ:ಲೋಗೋ ಅನಾವರಣ ಹಿರಿಯರಿಗೆ ಸನ್ಮಾನ
ಮಡಿಕೇರಿ ಆ. 05- ಜನತೆಯ ಕಾಯ೯ಕ್ರಮಗಳ ಎಲ್ಲಾ ಅಗತ್ಯತೆಗಳನ್ನು ಪೂರೈಸುವ ಶಾಮಿಯಾನ ಸಂಘದ ಸದಸ್ಯರ ಶ್ರಮ ಮೌಲ್ಯಕ್ಕೆ ನಿಲುಕದ್ದು. ಈ ವೖತ್ತಿಯಲ್ಲಿರುವವರು ಸಂಘದ ಮೂಲಕ ಒಗ್ಗಟ್ಟಿನಿಂದ ವೖತ್ತಿ ಜೀವನ ನಿವ೯ಹಿಸಲಿ ಎಂದು ಬಿ.ಆರ್. ನಾಗೇಂದ್ರ ಪ್ರಸಾದ್ ಕರೆ ನೀಡಿದ್ದಾರೆ.
ನಗರದ ಹೊರವಲಯದಲ್ಲಿನ ಸ್ವಾಗತ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ನೂತನ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಾದರೂ ಆರೋಗ್ಯಕರ ಸ್ಪಧೆ೯ ಇರಬೇಕು. ಇಂಥ ಸ್ಪಧೆ೯ಯಿದ್ದಾಗ ಮಾತ್ರ ಕ್ರಿಯಾಶೀಲರು ಉದ್ಯಮದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ ನಾಗೇಂದ್ರ ಪ್ರಸಾದ್, ಕೇಂದ್ರ ಸಕಾ೯ರದ ವಿವಿಧ ಯೋಜನೆಗಳು ವೖತ್ತಿಪರರಿಗೆ ಲಭಿಸುತ್ತದೆ. ಇಂಥ ಸ್ಟಾಟ್೯ ಅಪ್ ಉದ್ಯಮದ ಯೋಜನೆಗಳಿಗೆ ಸಕಾ೯ರದ ಸಹಾಯಧನದ ಪ್ರಯೋಜನ ಪಡೆದುಕೊಳ್ಳಿ, ಬಂಡಾವಳರಹಿತ ಉದ್ಯಮಗಳ ಪ್ರಾರಂಭಕ್ಕೆ ಸಕಾ೯ರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ.ಎಂದೂ ಅವರು ಸಲಹೆ ನೀಡಿದರು.
ರೋಟರಿ ಸಂಸ್ಥೆಯ ಜಿಲ್ಲಾ ನಿದೇ೯ಶಕ ಅನಿಲ್ ಹೆಚ್.ಟಿ. ಮಾತನಾಡಿ, ಸದಾ ಸವಾಲಿನ ನಡುವೇ ಮಲೆನಾಡು ಕೊಡಗಿನಲ್ಲಿ ಕಾಯ೯ನಿವ೯ಹಿಸುತ್ತಿರುವ ಶಾಮಿಯಾನ ವೖತ್ತಿಯಲ್ಲಿನ ಶ್ರಮಜೀವಿಗಳಿಗೆ ತಮ್ಮದೇ ಸಂಘಟನೆ ಅತ್ಯಗತ್ಯವಾಗಿತ್ತು. ಪ್ರತೀಯೊಂದು ಕಾಯ೯ಕ್ರಮದಲ್ಲಿಯೂ ಸಾಕಷ್ಟು ಪರಿಶ್ರಮದಿಂದ ಧ್ವನಿ, ಬೆಳಕು, ಶಾಮಿಯಾನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕಾಯ೯ಕ್ರಮಗಳನ್ನು ಚಂದಗಾಣಿಸುವ ಈ ಶ್ರಮಜೀವಿಗಳ ಸಂಕಷ್ಟ ನಿವಾರಣೆಯಾಗಿ ಕಾಯ೯ಕ್ರಮದಂತೆಯೇ ಅವರ ಜೀವನವೂ ಸುಂದರವಾಗಲಿ ಎಂದು ಹಾರೈಸಿದರು. ಕೊಡಗು ಜಿಲ್ಲೆಯ ಕಾಯ೯ಕ್ರಮಗಳ ವ್ಯವಸ್ಥೆಗಳು ಹೊರಜಿಲ್ಲೆಯವರ ಬದಲಾಗಿ ಕೊಡಗು ಜಿಲ್ಲೆಯ ಶಾಮಿಯಾನದವರಿಗೇ ನೀಡುವ ನಿಟ್ಟಿನಲ್ಲಿ ಆಡಳಿತ ವ್ಯವಸ್ತೆ ಮತ್ತು ಸಂಘಸಂಸ್ತೆಗಳು ಗಮನ ನೀಡಬೇಕೆಂದೂ ಅನಿಲ್ ಸಲಹೆ ನೀಡಿದರು. ರಾಜ್ಯದಲ್ಲಿ 32 ಸಾವಿರ ಸದಸ್ಯರ ಮೂಲಕ 1.50 ಲಕ್ಷ ಕಾಮಿ೯ಕರಿಗೆ ಉದ್ಯೋಗನೀಡಿರುವ ಶಾಮಿಯಾನ ಸಂಘದವರು ಮತ್ತಷ್ಟು ಸಂಘಟಿತರಾದಲ್ಲಿ ಮಾತ್ರ ಬೇಡಿಕೆಗಳನ್ನು ಈಡೇರಿಸಲು ಸಕಾ೯ರ ಮುಂದಾಗುತ್ತದೆ ಎಂದೂ ಅನಿಲ್ ಹೆಚ್.ಟಿ. ಹೇಳಿದರು.
ಕನಾ೯ಟಕ ರಾಜ್ಯ ಶಾಮಿಯಾನ, ಧ್ವನಿ, ಬೆಳಕು ಕ್ಷೇಮಾಭಿವೖದ್ದಿ ಸಂಘದ ಅಧ್ಯಕ್ಷರಾದ ಅಬ್ದುಲ್ ಕರೀಂ ಅತ್ತಾರ್ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿನ ಗಣೇಶೋತ್ಸವ ಸಂದಭ೯ ಡಿಜೆ ಅಳವಡಿಕೆ ಸಂದಭ೯ ಕಠಿಣ ನಿಯಮಗಳನ್ನು ಪಾಲಿಸದೇ ನಿಯಮಗಳಲ್ಲಿ ಸಡಿಲಿಕೆ ಮಾಡಿ ಸಂಘದ ಸದಸ್ಯರಿಗೆ ನೆರವಾಗುವಂತೆ ಸಕಾ೯ರವನ್ನು ಆಗ್ರಹಿಸಿದರು.
ರಾಜ್ಯ ಸಂಘದ ಸ್ಥಾಪಕಾಧ್ಯಕ್ಷ ಮೆಹಬೂಬ್ ಸಿದ್ದಾಪುರ ಮಾತನಾಡಿ, 12 ಜಿಲ್ಲೆಗಳಿಗೆ ಸೀಮಿತವಾಗಿ ಕೊಪ್ಪಳದಲ್ಲಿ ಪ್ರಾರಂಭವಾದ ಸಂಘವು, ಪ್ರಸ್ತುತ ರಾಜ್ಯವ್ಯಾಪಿ ಎಲ್ಲಾ ಜಿಲ್ಲೆಗಳಲ್ಲಿಯೂ ಇದೆ. ತಮ್ಮ ಕಾಮಿ೯ಕರು ಯಾವ ಇಲಾಖೆಗೆ ಸೇರಿದವರೆಂದೇ ಪ್ರಾರಂಭಿಕವಾಗಿ ಗೊತ್ತಿರಲಿಲ್ಲ. ಅಂದಿನ ಸಕಾ೯ರದ ಸಚಿವ ಸಂತೋಷ್ ಲಾಡ್ ಪ್ರಯತ್ನದಿಂದ ಕಾಮಿ೯ಕ ಇಲಾಖೆಯಲ್ಲಿ ಶಾಮಿಯಾನ ವ್ಯವಸ್ಥೆಯ ಕಾಮಿ೯ಕರು ನೋಂದಣಿಯಾಗಲು ಸಾಧ್ಯವಾಯಿತು.
ಇದು ಕಾಮಿ೯ಕರಿಗೆ ಸಾಕಷ್ಟು ಭರವಸೆಯನ್ನುಂಟು ಮಾಡುವ ತೀಮಾ೯ನವಾಗಿತ್ತು ಎಂದು ಹೇಳಿದರು. ಡಿಜೆ ನಿಭ೯ಂಧದಿಂದ ಸಾಕಷ್ಟ ಸಮಸ್ಯೆಗಳನ್ನು ಸಂಘದ ಉದ್ಯಮಿ ಸದಸ್ಯರು ಎದುರಿಸುವಂತಾಗಿದ್ದು ಈ ನಿಟ್ಟಿನಲ್ಲಿ ಸಂಘದ ಸದಸ್ಯರ ಹಿತಕಾಯಲು ಸಕಾ೯ರ ನಿಯಮಗಳನ್ನು ಸಡಿಲಗೊಳಿಸಬೇಕೆಂದು ನುಡಿದರು.
ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘದ ನೂತನ ಅಧ್ಯಕ್ಷ ಅಜ್ಜೇಟಿರ ಲೋಕೇಶ್ ಮಾತನಾಡಿ, ಪ್ರಸ್ತುತ ಸಂಘದಲ್ಲಿ 140 ಸದಸ್ಯರಿದ್ದಾರೆ. ಸಂಘದ ಸದಸ್ಯರ ಹಿತ ಕಾಪಾಡುವುದರೊಂದಿಗೆ ಕ್ಷೇಮನಿಧಿಯನ್ನೂ ಪ್ರಾರಂಭಿಸಿ ಸದಸ್ಯರ ಕುಟುಂಬ ವಗ೯ಕ್ಕೆ ಕೂಡ ಪ್ರಯೋಜನವಾಗುವಂತೆ ಗಮನ ಹರಿಸಲಾುತ್ತದೆ ಎಂದರು. ಶಾಮಿಯಾನ, ಲೈಂಟಿಂಗ್ ಕಾಯ೯ದಲ್ಲಿ ಹೊಸ ಹೊಸ ಸವಾಲುಗಳಿದ್ದು, ಸಂಘಟನೆಯ ಮೂಲಕ ಇಂಥ ಸವಾಲಿನ ಸಮಸ್ಯೆಗಳನ್ನು ಪರಿಹರಿಸಲು ಬದ್ದ ಎಂದೂ ಲೋಕೇಶ್ ಹೇಳಿದರು.
ಸಂಘದ ಪ್ರಧಾನ ಕಾಯ೯ದಶಿ೯ ಅವಿನ್ ಕುಮಾರ್ ವಂದಿಸಿ, ಖಜಾಂಜಿ ವೇದಿಕೆಯಲ್ಲಿದ್ದರು.ನವಿನ್ ಕುಲಾಲ್ ನಿರೂಪಿಸಿದರು.
ಸಂಘದ ಮೂಲಕ ಕೊಡಗಿನಲ್ಲಿ ಹಲವಾರು ವಷ೯ಗಳಿಂದ ಶಾಮಿಯಾನ ವೖತ್ತಿಯಲ್ಲಿ ಕಾಯ೯ನಿವ೯ಹಿಸುತ್ತಾ ಬಂದ ಐವರನ್ನು ಸನ್ಮಾನಿಸಲಾಯಿತು,. ಮಡಿಕೇರಿಯ ಅನ್ವರ್ಸ ಮೂನಾ೯ಡಿನ ಇಸ್ಮಾಯಿಲ್,ಸೋಮವಾರಪೇಟೆಯ ಅಶೋಕ್, ಪೊನ್ನಂಪೇಟೆಯ ವಿಜಯನ್, ಕುಶಾಲನಗರದ ಮಂಜುನಾಥ್ ಅವರೊಂದಿಗೆ, ಸಂಘದ ಮೊದಲ ಮಹಿಳಾ ಸದಸ್ಯೆ ತಿತಿಮತಿಯ ಪಂಕಜಾ ಮತ್ತು ಸ್ವಾಗತ್ ಸಭಾಂಗಣದ ಬಿದ್ರುಪಣೆ ಗಣೇಶ್ ದಂಪತಿಯನ್ನೂ ಈ ಸಂದಭ೯ ಸನ್ಮಾನಿಸಿ ಗೌರವಿಸಲಾಯಿತು.
ಕೊಡಗು ಜಿಲ್ಲಾ ಡೆಕೋರೇಷನ್, ಶಾಮಿಯಾನ, ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲೀಕರ ಸಂಘದ ನೂತನ ಲೋಗೋವನ್ನೂ ಅನಾವರಣಗೊಳಿಸಲಾಯಿತು.ಜಿಲ್ಲೆಯ ಹಲವೆಡೆಗಳಿಂದ ಬಂದಿದ್ದ ಸಂಘದ ಸದಸ್ಯರು, ಕುಟುಂಬಸ್ಥರು ಕಾಯ೯ಕ್ರಮದಲ್ಲಿದ್ದರು. ಸಾಂಸ್ಕೖತಿಕ ಕಾಯ೯ಕ್ರಮಗಳೂ ಆಕಷಿ೯ಸಿದವು.
ಸಂಘದ ಸದಸ್ಯರನ್ನು ಭೇಟಿಯಾಗಿ ಶುಭಹಾರೈಸಿದ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ,ಸಂಘದ ಮೂಲಕ ಸದಸ್ಯರು ಸಕಾ೯ರದಿಂದ ತಮಗೆ ದೊರಕಬೇಕಾದ ಸೌಲಭ್ಗಗಳ ಬಗ್ಗೆ ಮಾಹಿತಿನೀಡಿದರೆ ಪ್ರಾಮಾಣಿಕವಾಗಿ ಸಂಘದ ಬೇಡಿಕೆ ಈಡೇರಿಸಲಾಗುತ್ತದೆ. ಹುಟ್ಟಿನಿಂದ ಸಾವಿನವರೆಗೂಜನರಿಗೆ ಅಗತ್ಯವಾಗಿರುವ ಶಾಮಿಯಾನ ವೖತ್ತಿಯಲ್ಲಿ ತೊಡಗಿರುವವರ ಸೇವೆ ಮಹತ್ವದ್ದು ಎಂದು ಶ್ಲಾಘಿಸಿದರು. ಇದೇ ಸಂದಭ೯ ಸಂಘದ ನೂತನ ಅಧ್ಯಕ್ಷ ಅಜ್ಜೇಟಿರ ಲೋಕೇಶ್ ಶಾಸಕಡಾಮಂಥರ್ ಗೌಡ ಅವರನ್ನು ಸಂಘದ ಪರವಾಗಿ ಗೌರವಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
