ಕೊಡಗು ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿ: ಎಸ್.ಆರ್.ವಿ ಚಾಂಪಿಯನ್

May 17, 2026 - 20:34
 0  646
ಕೊಡಗು ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾವಳಿ: ಎಸ್.ಆರ್.ವಿ ಚಾಂಪಿಯನ್
Winners & runner's

ಮಡಿಕೇರಿ ಮೇ 17; ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ಅಮ್ಮತ್ತಿ ಪ್ರೌಢಶಾಲಾ‌ಮೈದಾನದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಮಡಿಕೇರಿಯ ಎಸ್.ಆರ್.ವಿ ತಂಡ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವೀರೋಚಿತ ಹೋರಾಟ‌ ನೀಡಿದ ಐಎನ್ಎಸ್ ಗುಡ್ಡೆ ಹೊಸೂರು ತಂಡ ರನ್ನರ್ ಅಪ್ ಗೆ ತೃಪ್ತಿಪಟ್ಟುಕೊಂಡಿತು.

 ಇಂದು ನಡೆದ ಮೊದಲ‌ ಸೆಮಿ ಫೈನಲ್ ಪಂದ್ಯದಲ್ಲಿ ಎಸ್.ಆರ್.ವಿ ತಂಡ ಸಹಾರಾ ಒಂಟಿಯಂಗಡಿ ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಿಲನ್ಸ್ ಅಮ್ಮತ್ತಿ ಮತ್ತು ಐಎನ್ಎಸ್ ಗುಡ್ಡೆ ಹೊಸೂರು ತಂಡಗಳ ಮಧ್ಯೆ ರೋಚಕ‌ ಹೋರಾಟ ನಡೆದು ಯಾವುದೇ ಗೋಲುಗಳಿಲ್ಲದೆ ಡ್ರಾ ಸಾಧಿಸಿದವು.‌ ಹಾಗಾಗಿ ಬಳಿಕ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಐಎನ್ಎಸ್ ತಂಡ 6-5 ಗೋಲುಗಳಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶ ಮಾಡಿತು. ಪ್ರಶಸ್ತಿ ವಿಜೇತ ತಂಡ‌30 ಸಾವಿರ ರೂ ನಗದು ಮತ್ತು ಆಕರ್ಷಕ ಟ್ರೋಫಿ ಗಳಿಸಿದರೆ ರನ್ನರ್ ಅಪ್ ತಂಡ 20 ಸಾವಿರ ರೂ ನಗದು ಹಾಗೂ ಆಕರ್ಷಕ ಟ್ರೋಫಿ ಜಯಿಸಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಡಿಎಫ್ಎ ಮಹಾ ಪೋಷಕ ಮೋಹನ್ ಅಪ್ಪಯ್ಯ, ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಕಾರ್ಯದರ್ಶಿ ಪಂದಿಕಂಡ ನಾಗೇಶ್, ಉಧ್ಯಮ ಅನಿಲ್‌ ಸೀನಪ್ಪ, ಫುಟ್ಬಾಲ್ ಸಂಸ್ಥೆಯ ರಾಜ್ಯ ಪ್ರತಿನಿಧಿ ಜಗದೀಶ್ ಪಿಕೆ, ಪಂದ್ಯಾವಳಿ ಉಸ್ತುವಾರಿ ಅರುಣ್ ಹಾಗೂ ಲಿಜೇಶ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0