ಮೇ.2 ರಂದು ನಡೆಯಲಿರುವ "ಮಾದರಿ ಮದುವೆ" ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿಗೆ ಕೊಡಗು ಜಿಲ್ಲಾ ಎಸ್ ವೈ ಎಸ್ ಸಮಿತಿ ಕರೆ

Apr 30, 2026 - 17:46
 0  163
ಮೇ.2 ರಂದು ನಡೆಯಲಿರುವ "ಮಾದರಿ ಮದುವೆ" ಅಭಿಯಾನ ಸಮಾರೋಪ ಸಮಾರಂಭ ಯಶಸ್ವಿಗೆ ಕೊಡಗು ಜಿಲ್ಲಾ ಎಸ್ ವೈ ಎಸ್ ಸಮಿತಿ ಕರೆ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ವತಿಯಿಂದ ಕೈಗೊಳ್ಳಲಾದ ‘ಮಾದರಿ ಮದುವೆ’ ಅಭಿಯಾನದ ಸಮಾರೋಪ ಸಮ್ಮೇಳನ ಹಾಗೂ ಬೃಹತ್ ಜನಜಾಗೃತಿ ಜಾಥಾ ಮೇ.2ರ ಶನಿವಾರ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಎಸ್ ವೈಎಸ್ ಕೊಡಗು ಜಿಲ್ಲಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದುವೆಗಳನ್ನು ಅನಾಚಾರ ಮುಕ್ತಗೊಳಿಸಲು ಮತ್ತು ಆರ್ಥಿಕ ಭಾರವನ್ನು ಹಗುರಗೊಳಿಸಲು ಎಂಬ ದೇಯವಾಕ್ಯದೊಂದಿಗೆ ಎಸ್ ವೈ ಎಸ್ ಸಂಘಟನೆಯು ನಾಲ್ಕು ತಿಂಗಳುಗಳಿಂದ 'ಮಾದರಿ ಮದುವೆ' ಅಭಿಯಾನವನ್ನು ನಡೆಸಿಕೊಂಡು ಬರುತಿದ್ದು, ಮದುವೆಯಲ್ಲಿ ನಡೆಯುತ್ತಿರುವ ಅನಾಚಾರ, ಆಧಾರ್ಮಿಕತೆ ಮತ್ತು ದುಂದುವೆಚ್ಚದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಮೇ. 2 ರಂದು ಸಂಜೆ 4 ಗಂಟೆಗೆ ದರ್ಬೆಯಿಂದ ಕಿಲ್ಲೆ ಮೈದಾನದವರೆಗೆ ಕಾಲ್ನಡಿಗೆ ಜಾಥಾ ನಡಿಯಲಿದ್ದು ಸಂಜೆ 5:30ಕ್ಕೆ ಖುರತ್ತುಸ್ಸಾದಾತ್ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಸಮ್ಮೇಳನದ ಸಮಾರೋಪ ಭಾಷಣ ಮಾಡಲಿದ್ದಾರೆ. ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ರಾಜ್ಯ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ದಿಕ್ಸೂಚಿ ಭಾಷಣ ನಡೆಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನಸಭಾ ಸ್ಪೀಕರ್ ಯುಟಿ ಖಾದರ್, ಶಾಸಕ ಅಶೋಕ್ ಕುಮಾರ್ ರೈ ಪಾಲ್ಗೊಳ್ಳಲಿದ್ದಾರೆ. ಕೊಡಗು ಜಿಲ್ಲೆಯ ಸುನ್ನಿ ಸಂಘ ಕುಟುಂಬದ ನಾಯಕರು ನೇತಾರರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೊಡಗು ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಮುನಿರ್ ಮಹ್ಳರಿ, ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಹಾಗೂ ಕೋಶಾಧಿಕಾರಿ ಶರೀಫ್ ಮಾಸ್ಟರ್ ಹೊಸತೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0