ಸಮಾರಂಭಗಳಲ್ಲಿ ನಡೆಯುತ್ತಿರುವ ವಂಚನೆ ತಡೆಗೆ ಕೊಡಗು ಜಿಲ್ಲಾ ಸೌಂಡ್, ಲೈಟ್, ಶಾಮಿಯಾನ, ಡೆಕೊರೇಷನ್ ಅಸೋಸಿಯೇಷನ್ ಪ್ರಯತ್ನ

Jun 25, 2026 - 15:20
 0  520
ಸಮಾರಂಭಗಳಲ್ಲಿ ನಡೆಯುತ್ತಿರುವ ವಂಚನೆ ತಡೆಗೆ ಕೊಡಗು ಜಿಲ್ಲಾ ಸೌಂಡ್, ಲೈಟ್, ಶಾಮಿಯಾನ, ಡೆಕೊರೇಷನ್ ಅಸೋಸಿಯೇಷನ್ ಪ್ರಯತ್ನ

ಮಡಿಕೇರಿ: ಸಮಾರಂಭಗಳಲ್ಲಿ ನಡೆಯುತ್ತಿರುವ ವಂಚನೆ ತಡೆಗೆ ಕೊಡಗು ಜಿಲ್ಲಾ ಸೌಂಡ್, ಲೈಟ್, ಶಾಮಿಯಾನ, ಡೆಕೊರೇಷನ್ ಅಸೋಸಿಯೇಷನ್ ಮುಂದಾಗಿದೆ ಎಂದು ಅಧ್ಯಕ್ಷ ಅಜ್ಜೆಟ್ಟಿರ ಲೋಕೇಶ್ ತಿಳಿಸಿದರು.

 ೮೦ ಸದಸ್ಯರ ಸಂಘವು ಸುರಕ್ಷತೆ, ಆಧುನಿಕ ಸೌಲಭ್ಯದ ಬಗ್ಗೆ ತಾಲೂಕುವಾರು ಕಾರ್ಯಾಗಾರ ನಡೆಸಲಿದೆ. ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಟಿ ಹಾಗೂ ಸದಸ್ಯರಿಗೆ ಆರೋಗ್ಯ ನೆರವು ನೀಡುವುದು ಸಂಸ್ಥೆಯ ಗುರಿಯಾಗಿದ್ದು, ಜುಲೈ ಅಂತ್ಯಕ್ಕೆ ಉದ್ಘಾಟನೆ ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಸೌಂಡ್, ಲೈಟ್, ಶಾಮಿಯಾನ, ಡೆಕೊರೇಷನ್ ಅಸೋಸಿಯೇಷನ್ ನೂತನ ಸಮಿತಿಗೆ ಅಧ್ಯಕ್ಷರಾಗಿ ಅಜ್ಜೆಟ್ಟಿರ ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ಅವಿನ್ ಕುಮಾರ್, ಕಾರ್ಯದರ್ಶಿಗಳಾಗಿ ರವೀಂದ್ರ, ಹರೀಶ್, ಖಜಾಂಚಿಯಾಗಿ ಎಚ್.ಪಿ.ಲೋಕೇಶ್ ಹಾಗೂ ೪ ಜನ ಉಪಾಧ್ಯಕ್ಷರು, ೯ ನಿರ್ದೇಶಕರನ್ನೂ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಅವಿನ್ ಕುಮಾರ್, ಪ್ರಮುಖರಾದ ಲೋಕೇಶ್, ಯಾಸೀನ್, ರವೀಂದ್ರ, ಬಿ.ಉಜ್ವಲ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0