ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ

Apr 21, 2026 - 19:22
 0  91
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆ

ಮಡಿಕೇರಿ ಏ.21:-ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸಭೆಯು ಶನಿವಾರ ನಗರದ ಪತ್ರಿಕಾಭವನದಲ್ಲಿ ನಡೆಯಿತು. ಬಳಗದಲ್ಲಿ ಪ್ರಾರಂಭ ಹಂತದಿಂದಲೂ, ಸದಸ್ಯರಾಗಿ, ಬಳಗದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸಿ, ಬಳಗದ ಯಶಸ್ಸಿಗೆ ಕಾರಣರಾಗಿ, ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರನ್ನು ಅಗಲಿದ ಹಿರಿಯ ಚೇತನ ಕುಶಾಲನಗರದಲ್ಲಿ ವಾಸವಿದ್ದ ಕಮಲ ಕರಿಯಪ್ಪ, ಹಿರಿಯ ಗಾಯಕರು, ಬಳಗದ ನಿರ್ದೇಶಕರೂ ಆಗಿದ್ದ ಮಡಿಕೇರಿಯ ಲಿಯಾಕತ್ ಅಲಿ ಹಾಗೂ ಬಳಗದ ಸಕ್ರೀಯ ಸದಸ್ಯರಾಗಿದ್ದ ತಮ್ಮಯ್ಯನವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

 ಟಿ ಪಿ ರಮೇಶ್ ರವರು,ಇವರುಗಳ ಸಾಹಿತ್ಯ ಪರಿಷತ್ತಿನ, ಬಳಗದ ಸೇವೆಯನ್ನು ಸ್ಮರಿಸಿ ಮಾತನಾಡಿದರು. ಬಳಗದ ವತಿಯಿಂದ ಸ್ಥಾಪಿಸಲ್ಪಟ್ಟಿರುವ ಟಿ.ಪಿ.ರಮೇಶ್ ಧತ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಮಹಾಸಭೆಯನ್ನು ನಡೆಸುವುದರ ಬಗ್ಗೆ ಚರ್ಚಿಸಲಾಯಿತು.

ಲೋಕನಾಥ್ ಅಮೇಚೂರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೇಶವ ಕಾಮತ್, ಟಿ.ಪಿ.ರಮೇಶ್, ಕೆ.ಟಿ.ಬೇಬಿಮ್ಯಾಥ್ಯೂ, ಉಮೇಶ್, ಕೋಶಾಧಿಕಾರಿ, ಕಡ್ಲೇರ ತುಳಸಿ ಮೋಹನ್, ಸುನೀತಾ ಪ್ರೀತು ಸಭೆಯಲ್ಲಿ ಹಾಜರಿದ್ದರು. ಕಾರ್ಯದರ್ಶಿ ಭಾರತಿ ರಮೇಶ್ ಸರ್ವರನ್ನು ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0