ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏಪ್ರಿಲ್ 27-ಮೇ 17 ರವರೆಗೆ ನಡೆಯುವ ಕ್ರಿಡಾಕೂಟದ ಕುಟುಂಬ-2026 ಪೋಸ್ಟರ್ ಬಿಡುಗಡೆ
admincoorgdaily

ಮಡಿಕೇರಿ; ಕೊಡಗು ಗೌಡ ಯುವ ವೇದಿಕೆ ವತಿಯಿಂದ ಏಪ್ರಿಲ್ 27-ಮೇ 17 ರವರೆಗೆ ನಡೆಯುವ ಕ್ರಿಡಾಕೂಟದ ಕುಟುಂಬ-2026 ಪೋಸ್ಟರ್‌ನ್ನು ವಿರಾಜಪೇಟೆ ಶಾಸಕರಾದ ಎಎಸ್ ಪೊನ್ನಣ್ಣ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಗೌಡ ಯುವ ವೇದಿಕೆಯ ಪದಾಧಿಕಾರಿಗಳು ಕೈ ಜೋಡಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜದ ಒಕ್ಕೂಟದ ಸರ್ವ ಸದಸ್ಯರು ಹಾಗೂ ಗೌಡ ಸಮುದಾಯದ ಅಧ್ಯಕ್ಷರುಗಳು, ಸದಸ್ಯರುಗಳು, ಪದಾಧಿಕಾರಿಗಳು ಹಾಗೂ ಪ್ರಮುಖರು ಒಕ್ಕೂಟದ ಸದಸ್ಯ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕೂಟದ ಸಹ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ ಸ್ವಾಗತಿಸಿದರೆ, ತೆಕ್ಕಡೆ ಆಶಾ ಪ್ರಾರ್ಥಿಸಿ, ಮುರ್ನಾಡು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಲ್ಲುಮುಟ್ಲು ಜಸ್ಮಿ ನಿರೂಪಿಸಿ ವಿರಾಜಪೇಟೆ ಗೌಡ ಸಮಾಜದ ಕಾರ್ಯದರ್ಶಿ ಮಂಞಂಡ್ರ ರೇಖಾ ಉಲ್ಲಾಸ್ ವಂದಿಸಿದರು.