ಕೊಡಗು ಪತ್ರಕತ೯ರ ಸಂಘದಿಂದ ಪ್ರಶಸ್ತಿಗಳಿಗೆ ಪೋಟೋ, ವರದಿ,ವೀಡಿಯೋಗಳ ಆಹ್ವಾನ
ಮಡಿಕೇರಿ: ಕೊಡಗು ಪತ್ರಕತ೯ರ ಸಂಘ (ರಿ) ದಿಂದ ಛಾಯಾಗ್ರಾಹಕರ ದಿನಾಚರಣೆಯಂದು ನೀಡಲಾಗುವ ವಾಷಿ೯ಕ ದತ್ತಿನಿಧಿ ಪ್ರಶಸ್ತಿಗಳಿಗೆ ಫೋಟೋ,ವೀಡಿಯೋ,ವರದಿಗಳನ್ನು ಆಹ್ವಾನಿಸಲಾಗಿದೆ.
ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರು ತಮ್ಮ ಪುತ್ರಿ ಡಾ. ಅನುಶ್ರೀ ಅವರ ಹ್ಯಾಪಿಟೀತ್ ಡೆಂಟಲ್ ಕ್ಲಿನಿಕ್ ಹೆಸರಿನಲ್ಲಿ ಸ್ಥಾಪಿಸಿರುವ ಮಾನವೀಯ ಮೌಲ್ಯಗಳನ್ನು ಒಳಗೊಂಡ ಅತ್ಯುತ್ತಮ ಛಾಯಾ ಚಿತ್ರ ಪ್ರಶಸ್ತಿಗೆ 2025 ನೇ ಸಾಲಿನಲ್ಲಿ ಜನವರಿ 1 ರಿಂದ ಡಿಸಂಬರ್ 31ರ ಒಳಗೆ ಪತ್ರಿಕೆಗಳಲ್ಲಿ ಪ್ರಕಟವಾದ ಛಾಯಾಚಿತ್ರಗಳನ್ನು ಕಳುಹಿಸಬಹುದು.
ಕೊಡಗು ಪತ್ರಕರ್ತರ ಸಂಘದಿಂದ ಮಳೆಗಾಲದ ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಅತ್ಯುತ್ತಮ ವೀಡಿಯೋಗ್ರಫಿಗಾಗಿ ನೀಡಲಾಗುವ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಜೂನ್ 1 ರಿಂದ ಆಗಸ್ಟ್ 10 ರ ಒಳಗೆ ಮಾಡಲಾಗಿರುವ ವಿಡಿಯೋಗಳನ್ನು ಕಳುಹಿಸಬಹುದು.
ಗುಂಡುಕುಟ್ಟಿ ಎಸ್ಟೇಟ್ ಮಾಲೀಕ ಜಿ.ಎಂ..ಮಹೇಂದ್ರ ಅವರು ತಮ್ಮ ತಂದೆ ಜಿ.ಎಂ. ಮೋಹನ್ ಹೆಸರಿನಲ್ಲಿ ನೀಡುವ ದತ್ತಿನಿಧಿ ಪ್ರಶಸ್ತಿಗಾಗಿ 2025 ನೇ ಸಾಲಿನ ಜನವರಿ 1 ರಿಂದ ಡಿಸಂಬರ್ 31 ರ ಒಳಗೆ ಪತ್ರಿಕೆಗಳಲ್ಲಿ ಪ್ರಕಟವಾದ ಕಾಫಿ ಉದ್ಯಮದ ಕುರಿತ ವರದಿಯನ್ನು ಸಲ್ಲಿಸಬಹುದಾಗಿದೆ.
ದೇವನಹಳ್ಳಿಯ ಸಮಾಜ ಸೇವಕ ಮಂಡಿಬೆಲೆ ರಾಜಣ್ಣ ಅವರು ತಮ್ಮ ಪೋಷಕರಾದ ಮಂಡಿಬೆಲೆ ದ್ಯಾವಮ್ಮ ಶ್ಯಾಮಣ್ಣಹೆಸರಿನಲ್ಲಿ ಸ್ಥಾಪಿಸಿರುವ ಕೊಡಗು ಜಿಲ್ಲೆಯ ಆದಿವಾಸಿಗಳ ಬದುಕಿಗೆ ಸಂಬಂಧಿಸಿದ ಮಾನವೀಯ ವರದಿ ಪ್ರಶಸ್ತಿಗೂ ವರದಿಯನ್ನು ಸಲ್ಲಿಸಬಹುದಾಗಿದ್ದು,ವರದಿಯು 2025 ನೇ ಸಾಲಿನಲ್ಲಿ ಜನವರಿ 1 ರಿಂದ ಡಿಸಂಬರ್ 31 ರ ಒಳಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು.
ಈ ನಾಲ್ಕು ಪ್ರಶಸ್ತಿಗಳಿಗೆ ಒಬ್ಬರು ತಲಾ ಒಂದು ವರದಿ, ಒಂದು ಛಾಯಾಚಿತ್ರವನ್ನು ,ಒಂದು ವೀಡಿಯೋಗಳನ್ನು ಮಾತ್ರ ನೀಡಬೇಕು.ವರದಿ,ಫೋಟೋ ಹಾಗೂ ವೀಡಿಯೋಗಳನ್ನು ಆಗಸ್ಟ್ 15 ರೊಳಗಾಗಿ ಪ್ರಧಾನ ಕಾಯ೯ದಶಿ೯, ಕೊಡಗು ಪತ್ರಕತ೯ರ ಸಂಘ (ರಿ), ಪತ್ರಿಕಾಭವನ ಟ್ರಸ್ಟ್, ಬಿ.ಎಸ್. ಗೋಪಾಲಕೖಷ್ಣ ರಸ್ತೆ, ಕೈಗಾರಿಕಾ ಬಡಾವಣೆ, ಮಡಿಕೇರಿ- 571201 ಇಲ್ಲಿಗೆ ಕಳುಹಿಸಬೇಕು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
