ಜೂ.13ರಂದು ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು-ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ
admincoorgdaily

ಮಡಿಕೇರಿ: ಜೂ.13ರಂದು ಮಡಿಕೇರಿಯ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು-ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶ ಆಯೋಜಿಸಿದೆ ಎಂದು ಅಧ್ಯಕ್ಷ ಸಿ.ಎಸ್.ಅಪ್ಪಯ್ಯ ತಿಳಿಸಿದ್ದಾರೆ.
ವಿಶೇಷ ಚೇತನರು, ವಿಧುರರು, ವಿಧವೆಯರು, ವಿಚ್ಛೇದಿತರು ಮತ್ತು ಮರುವಿವಾಹ ಬಯಸುವವರಿಗೆ ಪ್ರತ್ಯೇಕ ಆದ್ಯತೆಯಿದ್ದು, ವಿದೇಶ/ಹೊರ ರಾಜ್ಯದಲ್ಲಿರುವವರೂ ಭಾಗವಹಿಸಬಹುದು. ಬೆಳಗ್ಗೆ 9.30ಕ್ಕೆ ನೋಂದಣಿ ಆರಂಭವಾಗಲಿದ್ದು, ವಧುವಿಗೆ 18, ವರನಿಗೆ 21 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಫೋಟೋ, ಜಾತಕ, ಆಧಾರ್, ವಿದ್ಯಾರ್ಹತೆ, ಉದ್ಯೋಗದ ವಿವರ ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ 9448884673 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಕುಮಾರ್, ಕೆ.ರತ್ನಕುಮಾರಿ, ಎಸ್.ರಾಮಚಾರಿ, ಎಸ್.ಗಣಪತಿ, ಕೆ.ಲಲಿತ ಇದ್ದರು.