ಮೂರು ತಿಂಗಳಲ್ಲಿ 104 ಮೊಬೈಲ್ ಫೋನ್ ಪತ್ತೆ ಹಚ್ಚಿದ ಕೊಡಗಿನ ಸೈಬರ್ ಕ್ರೈಮ್ ಪೊಲೀಸರು
admincoorgdaily

ಮಡಿಕೇರಿ; ಕೊಡಗಿನ ಸೈಬರ್ ಕ್ರೈಂ ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ,ಮೂರು ತಿಂಗಳಲ್ಲಿ 100 ಮೊಬೈಲ್ ಪೋನ್ ರಿಕವರ್ ಮಾಡಲಾಗಿದೆ. ಮೊಬೈಲ್ ಫೋನ್ ಗಳನ್ನು ವಾರಸುದಾರರಿಗೆ ಎಸ್.ಪಿ ಬಿಂದು ಮಣಿ ಅವರು ಹಸ್ತಾಂತರಿಸಿದ್ದಾರೆ.
ಕೇವಲ ಮೂರು ತಿಂಗಳಲ್ಲಿ 104 ಮೋಬೈಲ್ ಪೊಲೀಸ್ ವಶಕ್ಕೆ ಪಡೆದಿದ್ದು,11 ಲಕ್ಷ ಮೌಲ್ಯದ 104 ಮೊಬೈಲ್ ಗಳನ್ನ ಪತ್ತೆಹಚ್ಚುವಲ್ಲಿ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ಬೇರೆ ಬೇರೆ ರಾಜ್ಯದಿಂದಲ್ಲೂ ಕೂಡ ಮೊಬೈಲ್ ವಶ ಪಡಿಸಿಕೊಂಡಿದ್ದು, ಮೊಬೈಲ್ ಪತ್ತೆಹಚ್ಚಿದ ಕೊಡಗು ಪೊಲೀಸರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು,ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸ್ ಸಿಬ್ಬಂದಿಗಳಿಗೆ ಎಸ್.ಪಿ ಬಿಂದು ಮಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.