State News

ಬೆಂಗಳೂರಿನಲ್ಲಿ ಕೊಡಗಿನ ವಿದ್ಯಾರ್ಥಿ ಆತ್ಮ*ಹ*ತ್ಯೆ! : Instagram ನಲ್ಲಿ ಆ*ತ್ಮ*ಹ*ತ್ಯೆಯ ಬಗ್ಗೆ ವಿದ್ಯಾರ್ಥಿಗಳಿಂದ ಚರ್ಚೆ!

admincoorgdaily

ಮಡಿಕೇರಿ: ಬೆಂಗಳೂರಿನ ಪ್ರತಿಷ್ಠಿತ ಕೋಶಿಯಸ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ದ್ವಿತೀಯ ಬಿಬಿಎ Aviation ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಂಗದೂರು ನಿವಾಸಿ ಸನಾ(19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಇಂದು ಬೆಳಗ್ಗೆ 10 -30 ಗಂಟೆಗೆ ತಾನು ನೆಲೆಸಿರುವ ಪಿಜಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ!

 ವಿದ್ಯಾರ್ಥಿ ಆತ್ಮಹತ್ಯೆ ಬಗ್ಗೆ Instagram ನಲ್ಲಿ ಚರ್ಚೆ:

 ಕೊಡಗು ಮೂಲದ ವಿದ್ಯಾರ್ಥಿ ಸನಾ ಆತ್ಮಹತ್ಯೆ ಬಗ್ಗೆ ಖ್ಯಾತ Instagram @ente_cassette ಎಂಬ ಯುವಕ ದೊಡ್ಡ ಮಟ್ಟದಲ್ಲಿ ಸನಾ ಆತ್ಮಹತ್ಯೆಯ ಬಗ್ಗೆ ಕಾರಣವೇನೆಂದು ತಿಳಿಯಲು ಅಭಿಯಾನ ನಡೆಸುತ್ತಿದ್ದಾರೆ. ಕೋಶಿಯಸ್ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ಹಾಗೂ ಸನಾ ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಹುಡುಗನ ಕಿರುಕಳ ತಾಳರಾದೆ ಸನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು Instagram ನಲ್ಲಿ ಆಕೆಯ ಸ್ನೇಹಿತರು ಹಂಚಿಕೊಂಡಿದ್ದಾರೆ. ಹುಡುಗನ ಫೋಟೋ ಶೇರ್ ಮಾಡಿ ಆತನಿಗೆ ಶಿಕ್ಷೆಯಾಗಬೇಕೆಂದು ಒತ್ತಾಯ ಕೇಳಿಬಂದಿದೆ.