ಚಿತ್ರದುರ್ಗ ವಿರುದ್ಧ 9-0 ಗೋಲುಗಳ ಭರ್ಜರಿ ಜಯ: ಫೈನಲ್‌ಗೆ ಲಗ್ಗೆಯಿಟ್ಟ ಕೊಡಗು ತಂಡ
ಮಡಿಕೇರಿ:ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ನಡೆಯುತ್ತಿರುವ ಅಂತರ ಜಿಲ್ಲಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ (Kodagu DFA) ತಂಡ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಚಿತ್ರದುರ್ಗ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ತಂಡವನ್ನು 9-0 ಗೋಲುಗಳ ಅಂತರದಿಂದ ಮಣಿಸಿ ಫೈನಲ್‌ಗೆ ಭರ್ಜರಿಯಾಗಿ ಪ್ರವೇಶಿಸಿದೆ.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕೊಡಗು ತಂಡ ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದೇ ಏಕಪಕ್ಷೀಯವಾಗಿ ಮೇಲುಗೈ ಸಾಧಿಸಿತು. ತಂಡದ ಆಟಗಾರ ಸಾವದ್ ಗೋಲುಗಳನ್ನು ದಾಖಲಿಸಿ ಗೆಲುವಿನ ರೂವಾರಿಯಾಗಿದರು.
ದಿವಾಕರ್ ಎರಡು ಗೋಲುಗಳನ್ನು ಬಾರಿಸಿ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ತಂಡದ ನಾಯಕ ವಿಜು , ಫಾರೂಕ್, ಸಾಬಿತ್ ಹಾಗೂ ಅಜಿತ್ ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವನ್ನು ಮತ್ತಷ್ಟು ಭರ್ಜರಿಗೊಳಿಸಿದರು. ಲೀಗ್ ಹಂತದಿಂದಲೇ ಉತ್ತಮ ಪ್ರದರ್ಶನ ನೀಡುತ್ತಿರುವ ಕೊಡಗು ತಂಡ ಇದೀಗ ಫೈನಲ್‌ಗೆ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಬೆಂಗಳೂರು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ (Bangalore DFA) ತಂಡವನ್ನು ಎದುರಿಸಲಿದೆ. ತಂಡದ ಸತತ ಗೆಲುವಿನಿಂದ ಜಿಲ್ಲೆಯ ಕ್ರೀಡಾಭಿಮಾನಿಗಳಲ್ಲಿ ಅಪಾರ ಉತ್ಸಾಹ ಮನೆ ಮಾಡಿದೆ.
ವರದಿ:ಅಶೋಕ ಮಡಿಕೇರಿ
What's Your Reaction?
Like
2
Dislike
0
Love
2
Funny
0
Angry
0
Sad
1
Wow
1
