ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಟೂರ್ನಿ: ಕೊಡಗಿನ ತಂಡಕ್ಕೆ ಚಿನ್ನ

ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಟೂರ್ನಿ: ಕೊಡಗಿನ ತಂಡಕ್ಕೆ ಚಿನ್ನ

ಕೇರಳ: ತಿರುವನಂತಪುರ ನಲ್ಲಿ ನಡೆದ ಸ್ಟಿಫನ್ ಜಾಕೋಬ್ ಕೋಶಿ ಅಂತರರಾಷ್ಟ್ರೀಯ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾರತೀಯ ಟೆಕ್ ಸಿಲ್ಕೋ ತಂಡವನ್ನು ಪ್ರತಿನಿಧಿಸಿದ್ದ ಕೊಡಗಿನ ಹಿರಿಯ ಬಾಸ್ಕೆಟ್ ಬಾಲ್ ತಂಡ ಮೂರು ಚಿನ್ನದ ಪದಕ ಮೂಡಿಗೆರಿಸಿಕೊಂಡಿದ್ದಾರೆ. 55 ವರ್ಷ ಮೇಲ್ಪಟ್ಟ ಪಂದ್ಯಾಟದಲ್ಲಿ ಒಂದು, 60 ವರ್ಷ ಮೇಲ್ಪಟ್ಟದ ತಂಡದಲ್ಲಿ ಒಂದು ಮತ್ತು 65 ವರ್ಷ ಮೇಲ್ಪಟ್ಟ ತಂಡಲ್ಲಿ ಒಂದು ಚಿನ್ನದ ಪದಕ ಗೆಲ್ಲುವ ಮೂಲಕ ಕ್ರೀಡಾ ತವರು ಕೊಡಗಿಗೆ ಹೆಮ್ಮೆ ತಂದಿದ್ದಾರೆ. ತಂಡದಲ್ಲಿ ಭಾಗವಹಿಸಿದ್ದ ಒಟ್ಟು 16 ಮಂದಿ ಕೊಡಗಿನವರಾಗಿದ್ದು. ತಂಡದಲ್ಲಿ ಅಂತಾರಾಷ್ಟ್ರೀಯ ಆಟಗಾರ್ಥಿ ಡಾ. ಪುಷ್ಪ ಕುಟ್ಟಣ್ಣ,ಕ್ಯಾಡಮಾಡ ದೇಚಮ್ಮ ಪುಣಚ್ಚ,ಪಾಳoಗಂಡ ವಾಣಿ ಚೆಂಗಪ್ಪ,ಕೊಲ್ಲಿ ಮಾಡ, ರಶ್ಮಿ ಅಯ್ಯಪ್ಪ,ಬಲ್ಯ ಮೀದೇರಿರ ಆಶಾ ಶಂಕರ್, ತಾತoಡ ಜ್ಯೋತಿ ಪ್ರಕಾಶ್, ಕೊಂಪುಳಿರ ಪ್ರೀತು ಪಳಂಗಪ್ಪ,ಐನಂಡ ಜಮುನಾ ಚಂಗಪ್ಪ,ಕೋಣೆರೀರಾ ಶಿಲ್ಪಾ ಪೆಮ್ಮಯ್ಯ,ಚೋವಂಡ ಜಮುನಾ ಸುರೇಶ್,ತೀತರಮಾಡ ಕಾವೇರಿ ಅಚ್ಚಯ್ಯ, ಬಾಕಿಲನ ವನಿತಾ ವಿಜಯಕುಮಾರ್,ಕೊದೆoಗಡ ರೇಷ್ಮಾ ನಂಜಪ್ಪ,ಕ್ಯಾಂಡೇರ ಜಲಜ ಗೋಪಾಲ್,ಮಳೇಟೀರಾ ರತಿ ಉತ್ತಪ್ಪ,ಸರಿತಾ ಸುಕುಮಾರನ್ ಭಾಗವಹಿಸಿದ್ದರು.