ಕೊಡವ ಕೌಟುಂಬಿಕ ಹಾಕಿ ಉತ್ಸವ:ನವೆಂಬರ್ 02ರಂದು ಬೆಂಗಳೂರಿನಲ್ಲಿ ಚೇನಂಡ ಕುಟುಂಬ ಹಾಕಿ ಉತ್ಸವದ ಲೋಗೋ ಅನಾವರಣ ಮಾಡಲಿರುವ ಸಿ.ಎಂ ಸಿದ್ದರಾಮಯ್ಯ
ಮಡಿಕೇರಿ: ಕೊಡವ ಕೌಟುಂಬಿಕ ಹಾಕಿ ಉತ್ಸವದ ಜವಾಬ್ದಾರಿ ಹೊತ್ತಿರುವ ಚೇನಂಡ ಕುಟುಂಬ ತನ್ನ ಹಾಕಿ ಉತ್ಸವದ ಲಾಂಚನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ ಮಾಡಲಿದ್ದಾರೆ ಎಂದು ಚೇನಂಡ ಹಾಕಿ ಉತ್ಸವ ಸಮಿತಿಯ ಸಹ ಖಜಾಂಚಿ ಬಬಿತ ಅಯ್ಯಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ.2ರಂದು ಬೆಂಗಳೂರಿನ ಕೃಷ್ಣಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಸೇರಿದಂತೆ ಚೇದಂಡ ಕುಟುಂಬಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹಾಕಿ ಉತ್ಸವ ಸಮಿತಿ ಕಾರ್ಯದರ್ಶಿ ಸಿ.ಎಸ್.ಮಾದಯ್ಯ ಮಾತನಾಡಿ, ಹಾಕಿ ಅಕಾಡೆಮಿ ಆಶ್ರಯದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ಈ ಬಾರಿ ಸೆಮಿನಾರ್, ಡಾಗ್ ಶೋ ಹಮ್ಮಿಕೊಳ್ಳಲಾಗುವುದು. ಜನವರಿಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಮುಕ್ತ ಬಾಲಕ ಬಾಲಕಿಯರ ಹಾಕಿ ಪಂದ್ಯಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಚೇನಂಡ ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಸಿ.ಪಿ.ಕರುಂಬಯ್ಯ, ಕಾರ್ಯಾಧ್ಯಕ್ಷರಾದ ಸಿ.ಟಿ.ಚೆಂಗಪ್ಪ, ಖಜಾಂಚಿ ಶ್ಯಾಮಲ ಚೆಂಗಪ್ಪ, ನಿರ್ದೇಶಕರಾದ ನಮೃತಾ ಅಯ್ಯಣ್ಣ ಉಪಸ್ಥಿತರಿದ್ದರು.