ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ;ಕನ್ನಂಡ ತಂಡಕ್ಕೆ ಭರ್ಜರಿ ಗೆಲುವು
ನಾಪೋಕ್ಲು: ಇಲ್ಲಿನ ಕೆಪಿಎಸ್ ಶಾಲೆಯ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಮಂಗಳವಾರ ಕನ್ನಂಡ ಬಲ್ಟಿಕಾಳಂಡ ತಂಡದ ವಿರುದ್ಧ 6-0 ಅಂತರದಿಂದ, ಸೋಮೆಯಂಡ ಗಾಡಂಗಡ ವಿರುದ್ಧ 5-0 ಅಂತರದಿಂದ, ಕೊಂಗೆಟೀರ ಬಡ್ಡೀರ ವಿರುದ್ಧ 5-0 ಅಂತರದಿಂದ ಭರ್ಜರಿ ಜಯಬೇರಿ ಬಾರಿಸಿದವು.
ಕನ್ನಂಡ ತಂಡದಾಟಗಾರರಾದ ನಾಚಪ್ಪ-2,ಕಾವೇರಪ್ಪ-2,ರೋಹನ್-1,ಬೋಪಣ್ಣ-1 ಗೋಲುಗಳಿಸಿ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು. ಮುಕ್ಕಾಟಿರ (ಪುಲಿಕೋಟು) ಮತ್ತು ಸುಳ್ಳಿಮಾಡ ತಂಡಗಳು ವಾಕ್ ಓವರ್ ಗಳಿಸಿದವು.
ಉಳಿದಂತೆ ಚಿಮ್ಮಣಮಾಡ ಕನ್ನಿಕಂಡ ವಿರುದ್ಧ 2-1ರಿಂದ ,ಕುಲ್ಲೇಟೀರ ಮುಂಡೋಟಿರ ವಿರುದ್ಧ 3-0ರಿಂದ ಗೆಲುವುಪಡೆದರು. ಚಂಗುಲಂಡ ಆಪಾಡಂಡ ವಿರುದ್ಧ 3-0ರಿಂದ ಜಯಸಾಧಿಸಿದರೆ, ಪಳಂಗಂಡ ಪಾಲಂದೀರ ವಿರುದ್ಧ 2-0 ಅಂತರದಿಂ,ಮುಂಡಿಯೋಳಂಡ ಅಲ್ಲಾರಂಡ ವಿರುದ್ಧ 2-1ರಿಂದ,ಶಿವಚಾಳಿಯಂಡ ಕರ್ತಚೀರ ವಿರುದ್ಧ 2-0ರಿಂದಹಾಗೂ ಮೈಂದಪಂಡ ಕೇತಿರ ವಿರುದ್ಧ 2-0 ಅಂತರದಿಂದ ಜಯಸಾಧಿಸಿದವು.
ಅಜ್ಜಮಾಡ ವಿರುದ್ದ ಮಣವಟ್ಟೀರ 0-4 ರಿಂದ , ಬೇಪಡಿಯಂಡ ವಿರುದ್ಧ ಕೇಲೇಟಿರ 0-1 ರಿಂದ, ಬಿದ್ದಾಟಂಡ ಚಪ್ಪಂಡ ವಿರುದ್ದ 3-4ರಿಂದ,ಮಲ್ಲಾಜಿರ ಮುಕ್ಕಾಟಿರ (ಕುಂಜಿಲಗೇರಿ) ವಿರುದ್ಧ 0-2ರಿಂದ ಪಾಡೆಯಂಡ ಬಾದುಮಂಡ ವಿರುದ್ಧ 2-3ರಿಂದ ಗೆಲುವುಸಾಧಿಸಿದವು.
ಮಾರ್ಚಂಡ ಮಾಣಿರವಿರುದ್ಧ6-0 ಅಂತರದಿಂದ ,ಬಾಳೇಕುಟ್ಠಿರ ಬೊವ್ವೇರಿಯಂಡ ವಿರುದ್ಧ4-0 ಅಂತರದಿಂದಜಯಗಳಿಸಿತು.
ಚೇನಂಡ ಹಾಕಿಉತ್ಸವದ ಪ್ರಾಯೋಜಕರಲ್ಲಿಒಬ್ಬರಾದ ನಾರಾಯಣ ಹೆಲ್ತ್ ಮತ್ತು ಇನ್ಸೂರೆನ್ಸ್ ಪ್ರತಿದಿನ ವೀಕ್ಷಕರ ಉಚಿತ ಆರೋಗ್ಯತಪಾಸಣೆ ನಡೆಸಿದರು.
ಅರ್ಜುನ ಪ್ರಶಸ್ತಿವಿಜೇತ ಮಾಜಿ ಒಲಂಪಿಯನ್ ಎಂ.ಎಂ.ಸೋಮಯ್ಯ ಮಂಗಳವಾರ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಮನೆಯಪಂಡ ತಂಡದ ಆಟಗಾರರನ್ನು ಹುರಿದುಂಬಿಸಿದರು ನ್ಯಾಷನಲ್ ಕ್ರೀಡಾಪಟು ಕನ್ನಂಡ ವರ್ಣ ಭೋಜಮ್ಮ ತಮ್ಮ ಕುಟುಂಬದ ಪರವಾಗಿ ಗೋಲ್ ಕಿ ಪರಾಗಿ ಆಟವಾಡಿದರು.
ಇಂದಿನ ಪಂದ್ಯಗಳು:
9ಕ್ಕೆ ಕೊಂಗಂಡ ಮತ್ತು ಮೊಳ್ಳೇರ
10 ಕ್ಕೆ ನಾಪಂಡ ಮತ್ತು ಮಚ್ಚುರ
11ಕ್ಕೆಅಪ್ಪಚೆಟ್ಟೋಳಂಡ ಮತ್ತು ಸುಳ್ಳಿಮಾಡ
12ಕ್ಕೆ ಬಾಚಮಂಡ ಮತ್ತು ಕುಂಡ್ಯೋಳಂಡ
1ಕ್ಕೆ ಕೋಟೇರ ಮತ್ತು ಮುಕ್ಕಾಟಿರ (ಕುಂಬಳದಾಳು)
3 ಕ್ಕೆ ಚೇಂದಿರ ಮತ್ತು ಚೊಟ್ಟೆಯಂಡ
3.30 ಕ್ಕೆ ಕಂಗಾಂಡ ಮತ್ತು ಜಮ್ಮಡ
ಮೈದಾನ 2;
9ಕ್ಕೆ ದಾಸಂಡ ಮತ್ತು ಪೆಮ್ಮಂಡ
10 ಕ್ಕೆ ಚೆನ್ನಪಂಡ ಮತ್ತು ಮಲ್ಲಂಡ
11ಕ್ಕೆ ಮಂಡೀರ(ನೆಲಜಿ) ಮತ್ತು ಮಾದೆಯಂಡ
12ಕ್ಕೆ ಚೆಯ್ಯಂಡ ಮತ್ತು ಕಾಡ್ಯಮಾಡ
2ಕ್ಕೆ ಮಂಡೀರ (ಮೂವತೋಕ್ಲು) ಮತ್ತು
ಬಾಚಳ್ಳೀರ
3 ಕ್ಕೆ ವಾಟೇರಿರ ಮತ್ತು ಕಾಳೆಂಗಡ
3:30ಕ್ಕೆ ಮತ್ರಂಡ ಮತ್ತು ಕಾಂಡೇರ
ಮೈದಾನ 3;
9ಕ್ಕೆ ಅಲ್ಲಪಂಡ ಮತ್ತು ತೀತಿಮಾಡ
10 ಕ್ಕೆ ಚೌರೀರ (ಹೊದ್ದೂರ್) ಮತ್ತು ಚೇಂದ್ರಿಮಾಡ (ನಾಂಗಾಲ)
11ಕ್ಕೆ ಅಜ್ಜಿನಂಡ ಮತ್ತು ಚೌರೀರ (ಹೊದವಾಡ)
12ಕ್ಕೆ ಐತಿಚಂಡ ಮತ್ತು ಪುಗ್ಗೇರ
2ಕ್ಕೆ ಮೂಕಳಮಾಡ ಮತ್ತು ಪೋರಂಗಡ
3ಕ್ಕೆ ಅಪ್ಪಂಡೇರಂಡ ಮತ್ತು ಮೇದುರ
3:30ಕ್ಕೆ ಕಲ್ಲುಮಾಡಂಡ ಮತ್ತು ಮೇವಡ