ಪವಿತ್ರ ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ 2027 ನೇ ಸಾಲಿನ ಆತಿಥೇಯ ಅಜ್ಜಿಕುಟ್ಟಿರ ಕುಟುಂಬಸ್ಥರಿಗೆ ಆಯೋಜನೆಯ ಹಕ್ಕನ್ನು ಹಸ್ತಾಂತರಿಸಿದ ಕೊಡವ ಹಾಕಿ ಅಕಾಡಮಿ

Jul 11, 2026 - 13:34
Jul 11, 2026 - 13:36
 0  432
ಪವಿತ್ರ ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ 2027 ನೇ ಸಾಲಿನ ಆತಿಥೇಯ ಅಜ್ಜಿಕುಟ್ಟಿರ ಕುಟುಂಬಸ್ಥರಿಗೆ ಆಯೋಜನೆಯ ಹಕ್ಕನ್ನು ಹಸ್ತಾಂತರಿಸಿದ ಕೊಡವ ಹಾಕಿ ಅಕಾಡಮಿ

ಮಡಿಕೇರಿ: 2027 ನೇ ಸಾಲಿನಲ್ಲಿ ನಡೆಯುವ ವಿಶ್ವವಿಖ್ಯಾತ ಅಜ್ಜಿಕುಟ್ಟಿರ ಕೊಡುವ ಹಾಕಿ ನಮ್ಮೆಯ ಆತಿತ್ಯ ಹಕ್ಕು ಪತ್ರವನ್ನು ಇಂದು ಪವಿತ್ರ ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡಂಡ ಬೋಪಣ್ಣ ರವರು ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ನರೇನ್ ಕಾರ್ಯಪ್ಪ ಹಾಗೂ ಶಾಸಕರು ಗೌರವಾಧ್ಯಕ್ಷರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಮತ್ತು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

 ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಶಾಸಕರೊಂದಿಗಿದ್ದರು. ಶ್ರೀ ಪಾಡಿ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ಮೊದಲಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ, ಆಯೋಜಕ ಹಕ್ಕು ಪತ್ರವನ್ನು ಕೊಡವ ಹಾಕಿ ಅಕಾಡೆಮಿ ವತಿಯಿಂದ ಅಜ್ಜಿಕುಟ್ಟಿರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕೊಡವ ಹಾಕಿ ಅಕಾಡೆಮಿ ಕಾರ್ಯಧ್ಯಕ್ಷರಾದ ಚೆಪ್ಪುಡೀರ ಪೂಣಚ್ಚ, ಕಾರ್ಯದರ್ಶಿ ಕುಲ್ಲೇಟಿರ ಬೇಬ, ನಿರ್ದೇಶಕರು ಕಲಿಯಂಡ ಸಂಪನ್ ಅಯ್ಯಪ್ಪ, ಮುದ್ದಂಡ ರಿಷಿನ್ ಸುಬ್ಬಯ್ಯ, ಅಖಿಲ ಕೊಡವ ಸಮಾಜದ ಅಧ್ಯಕ್ಷರು ಪರದಂಡ ಸುಬ್ರಮಣಿ, ಅಜ್ಜಿಕುಟ್ಟಿರ ಕುಟುಂಬದ ಸಜನ್, ಕಾರ್ಯದರ್ಶಿ ಪೂಣಚ್ಚ, ಸದಸ್ಯರು ಗಿರೀಶ್, ಪೊನ್ನಪ್ಪ, ಪ್ರಖ್ಯಾತ್, ಮಧು, ಸುರೇಂದ್ರ, ಹ್ಯಾರಿ, ಬಾಚಮಾಂಡ ರಾಜ, ಲವ ಚಿಣ್ಣಪ್ಪ, ಬೋಳಂಡ ಗಿರೀಶ್, ಕೋಡಿರ ವಿನೋದ್ ನಾಣಯ್ಯ, ಐತ್ತಿತಂಡ ಪ್ರಕಾಶ್, ಕುಂಡಚ್ಚಿರ ಮಂಜು ದೇವಯ್ಯ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0