ಕೊಡವ ಲೆದರ್ ಬಾಲ್ ಕ್ರಿಕೆಟ್ ಲೀಗ್; ಎಂ.ಟಿ.ಬಿ ರಾಯಲ್ಸ್, ಪ್ರಗತಿ ಕ್ರಿಕೆಟ್ ಅಕಾಡೆಮಿಗೆ ಗೆಲುವು
ಪೊನ್ನಂಪೇಟೆ; ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ಗೋಣಿಕೊಪ್ಪಲು ಕಾವೇರಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ 3 ನೇ ವರ್ಷದ ಟಿ 20 ಮಾದರಿಯ ಕೊಡವ ಲೆದರ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ನ 8 ನೇ ದಿನದಾಟದಲ್ಲಿ ಎಂ.ಟಿ.ಬಿ ರಾಯಲ್ಸ್ ಮತ್ತು ಪ್ರಗತಿ ಕ್ರಿಕೆಟ್ ಅಕಾಡಮಿ ಗೆಲುವು ಸಾಧಿಸಿದವು.
ತಾ.17 ರ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಯುನೈಟೆಡ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 129 ರನ್ ಗಳ ಅಲ್ಪ ಮೊತ್ತ ಕಲೆಹಾಕಿ, ಎಂ.ಟಿ. ಬಿ ರಾಯಲ್ಸ್ ಗೆ 130 ರನ್ ಗಳ ಗುರಿ ನೀಡಿತು.ಶರತ್ 40 ಎಸೆತಗಳಲ್ಲಿ 31 ರನ್ ಬಾರಿಸಿದರು. ಎಂಟಿಬಿ ರಾಯಲ್ಸ್ ಪರ ಸುಕ್ಕಿ 3 ವಿಕೆಟ್ ಪಡೆದರು.
130 ರನ್ ಗಳ ಗುರಿ ಬೆನ್ನಟ್ಟಿದ ಎಂ.ಟಿ.ಬಿ ರಾಯಲ್ಸ್ 19 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಜಯ ಸಾಧಿಸಿತು. ವೈಶಾಖ್ ತಿಮ್ಮಯ್ಯ 37 ಎಸೆತಗಳಲ್ಲಿ 42 ರನ್ ಗಳ ಕಾಣಿಕೆ ನೀಡಿದರು.ಕೂರ್ಗ್ ಯುನೈಟೆಡ್ ಪರ ಪಾಲಂದೀರ ಚಂದ್ರು 1 ವಿಕೆಟ್ ಪಡೆದರು. ಎಂ.ಟಿ.ಬಿ ರಾಯಲ್ಸ್ ನ ಸುಕ್ಕಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.
ಬ್ಲೇಜ್ ಬ್ರಿಗೇಡ್ ಮತ್ತು ಪ್ರಗತಿ ಕ್ರಿಕೆಟ್ ಅಕಾಡಮಿ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರಗತಿ ಕ್ರಿಕೆಟ್ ಅಕಾಡಮಿ 18 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ತಮನ್ 37 ಎಸೆತಗಳಲ್ಲಿ 58 ರನ್ ಗಳಿಸಿದರು.ಬ್ಲೇಜ್ ಬ್ರಿಗೇಡ್ ಸ್ಕಂದ್ 4 ವಿಕೆಟ್ ಪಡೆದು ಮಿಂಚಿದರು.
ಗೆಲ್ಲಲು 148 ರನ್ ಗಳ ಸುಲಭ ಗುರಿ ಬೆನ್ನಟ್ಟಿದ ಬ್ಲೇಜ್ ಬ್ರಿಗೇಡ್ ಕೇವಲ 18.2 ಓವರ್ ಗಳಲ್ಲಿ 120 ರನ್ ಗಳಿಸಿ ಸರ್ವ ಪತನಗೊಂಡು, 27 ರನ್ ಗಳಿಂದ ಸೋಲುಕಂಡಿತು. ಸಂಜು ಬೋಪಯ್ಯ 36 ಎಸೆತಗಳಲ್ಲಿ 53 ರನ್ ಸಿಡಿಸಿದರು. ಪ್ರಗತಿ ಕ್ರಿಕೆಟ್ ಅಕಾಡಮಿ ಪರ ಅಕ್ಷರ್ 3 ವಿಕೆಟ್ ಪಡೆದರು.ಅಲನ್ ದೇವಯ್ಯ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.
ನಾಳಿನ ಪಂದ್ಯಗಳು:
ಬೆಳಗ್ಗೆ 9.30 ಕ್ಕೆ: ಟೀಮ್ ಕೊಡವ ಟ್ರೈಬ್ V/S ಕೂರ್ಗ್ ಯುನೈಟೆಡ್.
ಮಧ್ಯಾಹ್ನ 1.30 ಎಂ.ಟಿ.ಬಿ ರಾಯಲ್ಸ್ V/S ಬ್ಲೇಜ್ ಬ್ರಿಗೇಡ್
